ADVERTISEMENT

ಸಿಹಿ ಗೆಣಸಿನ ಸವಿಗಳು

ನಳಪಾಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಸಿಹಿ ಗೆಣಸಿನ ಸವಿಗಳು
ಸಿಹಿ ಗೆಣಸಿನ ಸವಿಗಳು   
-ಸವಿತಾ ನಾಯ್ಕ
 
**
ಗೆಣಸಿನ ಬೋಂಡಾ
ಬೇಕಾಗುವ ಸಾಮಗ್ರಿಗಳು
ಗೆಣಸು – ಅರ್ಧ ಕೆ.ಜಿ. 
ಕಡಲೆಹಿಟ್ಟು – ಕಾಲು ಕೆ.ಜಿ.
ಇಂಗು – ಸ್ವಲ್ಪ
ಮೆಣಸಿನ ಪುಡಿ – 2 ಚಮಚ 
ರುಚಿಗೆ ಉಪ್ಪು 
ಎಣ್ಣೆ - ಕರಿಯಲು
 
ತಯಾರಿಸುವ ವಿಧಾನ
ಗೆಣಸನ್ನು ಬೇಕಾದ ಆಕಾರಕ್ಕೆ ತೆಳ್ಳಗೆ ಕತ್ತರಿಸಿ. ಕಡಲೆಹಿಟ್ಟಿಗೆ ಉಪ್ಪು, ಇಂಗು, ಮೆಣಸಿನ ಪುಡಿ ಹಾಕಿ ನೀರು ಹಾಕಿ ದೋಸೆಹಿಟ್ಟಿನಂತೆ ಕಲಸಿ. 
 
ಪ್ಯಾನ್‌ನಲ್ಲಿ ಎಣ್ಣೆ ಕಾಯಲು ಇಟ್ಟು ಕತ್ತರಿಸಿದ ಗೆಣಸಿನ ಹೋಳನ್ನು ಹಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಎರಡೂ ಬದಿಯೂ ಕೆಂಪಾದ ನಂತರ ತೆಗೆದರೆ ಆಯಿತು. ಗರಿಗರಿಯಾದ ಬೋಂಡಾ ರೆಡಿ.
 
 
**
ಚಿಪ್ಸ್
ಬೇಕಾಗುವ ಸಾಮಗ್ರಿಗಳು
ಗೆಣಸು – 3
ಚಿಪ್ಸ್ ಮಸಾಲಾ ಪುಡಿ 
ಕರಿಯಲು ಎಣ್ಣೆ 
 
ತಯಾರಿಸುವ ವಿಧಾನ
ಗೆಣಸನ್ನು ತೊಳೆದು ಸಿಪ್ಪೆ ತೆಗೆಯಿರಿ. ತೆಳ್ಳಗಿನ ತುಂಡು  ಮಾಡಿ. ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿಕೊಂಡು ಗೆಣಸಿನ ತುಂಡುಗಳನ್ನು ಹದವಾದ ಉರಿಯಲ್ಲಿ ಗರಿಯಾಗುವ ತನಕ ಕರಿಯಿರಿ.
 
ಕರಿದ ಚಿಪ್ಸ್ ಅನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹರವಿ ತಣ್ಣಗಾಗಲು ಬಿಡಿ. ಇದಕ್ಕೆ ಉಪ್ಪು, ಮಸಾಲಾ ಪುಡಿ ಸೇರಿಸಿದರೆ ಚಿಪ್ಸ್‌ ರೆಡಿ.
 
 
**
ಪರೋಟ
ಬೇಕಾಗುವ ಸಾಮಗ್ರಿಗಳು
ಸಿಹಿ ಗೆಣಸು – 2
ಸಕ್ಕರೆ – ರುಚಿಗೆ 
ಗೋಧಿಹಿಟ್ಟು – 5 ಕಪ್ 
ಏಲಕ್ಕಿ ಪುಡಿ – ಅರ್ಧ ಟೀ ಚಮಚ
ರುಚಿಗೆ ತಕ್ಕಷ್ಟು – ಉಪ್ಪು
ತುಪ್ಪ – ಸ್ವಲ್ಪ 
ಎಣ್ಣೆ – 5 ಚಮಚ
 
ತಯಾರಿಸುವ ವಿಧಾನ
ಗೆಣಸನ್ನು ಬೇಯಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಗೋಧಿ ಹಿಟ್ಟಿಗೆ ಎಣ್ಣೆ, ನೀರು, ಉಪ್ಪು  ಸೇರಿಸಿ ಕಲೆಸಿ. ಪೂರಿ ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಎರಡು ಉಂಡೆ ಲಟ್ಟಿಸಿ ಅದರ ನಡುವೆ ಗೆಣಸಿನ ಮಿಶ್ರಣ  ಸೇರಿಸಿ ಪುನಃ ಲಟ್ಟಿಸಿ. ಸಣ್ಣ ಉರಿಯಲ್ಲಿ ಬೇಯಿಸಿ.
 
***
ಪಾಲಕ್‌ ಮಿಕ್ಸ್‌ ಫ್ರೈ
ಬೇಕಾಗುವ ಸಾಮಗ್ರಿಗಳು
ಸಿಹಿ ಗೆಣಸು – 5
ಪಾಲಕ್ ಸೊಪ್ಪು – 2 ಬಟ್ಟಲು 
ಹಸಿಮೆಣಸು – 4 
ಗರಂ ಮಸಾಲ – 1 ಚಮಚ
ಕೆಂಪು ಮೆಣಸಿನ ಪುಡಿ – 1ಚಮಚ
ರುಚಿಗೆ ಉಪ್ಪು
ಸಾಸಿವೆ –  2 ಚಮಚ
ಬೆಣ್ಣೆ  – 2 ಚಮಚ
 
ತಯಾರಿಸುವ ವಿಧಾನ
ಬೆಣ್ಣೆಯೊಂದಿಗೆ ಪಾಲಕ್ ಸೊಪ್ಪನ್ನು ಹುರಿದುಕೊಳ್ಳಿ. ಇದಕ್ಕೆ ಬೇಯಿಸಿದ ಸಿಹಿ ಗೆಣಸನ್ನು ಬೆರೆಸಿ ಚೆನ್ನಾಗಿ ಕೈಯಾಡಿಸಿ. ಪಾಲಾಕ್ ಸೊಪ್ಪಿನ ಬಣ್ಣ ಬದಲಾಗುವುದನ್ನು ನೋಡಿ. ಸ್ವಲ್ಪ ಬಣ್ಣ ಬದಲಾಗುತ್ತಿದೆ ಎನ್ನುವಾಗ ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುವಿ.
 
ಇನ್ನೊಂದೆಡೆ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ ಒಗ್ಗರಣೆ ಹಾಕಿ. ಒಗ್ಗರಣೆಯನ್ನು ಗೆಣಸಿನ ಮಿಶ್ರಣಕ್ಕೆ ಬೆರೆಸಿದರೆ ಮುಗಿಯಿತು.
 
**
ಗೆಣಸಿನ ಪಲ್ಯ
ಬೇಕಾಗುವ ಸಾಮಗ್ರಿಗಳು
ಗೆಣಸು –  2
ರುಚಿಗೆ ಉಪ್ಪು
ಮೆಣಸಿನ ಪುಡಿ – 2ಚಮಚ 
ಅರಿಶಿನದ ಪುಡಿ – ಅರ್ಧ ಚಮಚ
ತೆಂಗಿನ ತುರಿ – ಅರ್ಧಕಪ್
ಉದ್ದಿನ ಬೇಳೆ – ಅರ್ಧ ಚಮಚ
 
ತಯಾರಿಸುವ ವಿಧಾನ
ಗೆಣಸನ್ನು ಸಣ್ಣಗೆ ಹೆಚ್ಚಿ ಹೋಳನ್ನು ತೊಳೆದು, ಉಪ್ಪು, ಅರಿಶಿಣದ ಪುಡಿ, ಮೆಣಸಿನ ಪುಡಿ, ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ನಂತರ ಹೋಳನ್ನು ಹಾಕಿ, ಅರ್ಧಲೋಟ ನೀರು ಹಾಕಿ. ಸೌಟಿನಿಂದ ಮಗುಚಿ ಮುಚ್ಚಿಟ್ಟು ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಹಾಕಿ ಕೆಳಗಿಳಿಸಿ. ಇದನ್ನು ಊಟದ ಜೊತೆ ಸವಿಯಬಹುದು.

**

100 ಗ್ರಾಂ ಗೆಣಸಿನಲ್ಲಿ ಏನೇನಿದೆ?
ಶೇ 28.2 ಕಾರ್ಬೊಹೈಡ್ರೇಟ್
ಶೇ 0.3 ಕೊಬ್ಬು
ಶೇ 1.2 ಪ್ರೊಟೀನ್
50 ಮಿಲಿಗ್ರಾಂ ರಂಜಕ
9 ಮಿಲಿಗ್ರಾಂ ಸೋಡಿಯಂ
20 ಮಿಲಿಗ್ರಾಂ ಕ್ಯಾಲ್ಸಿಯಂ
2.8 ಮಿಲಿಗ್ರಾಂ ಕಬ್ಬಿಣ
393 ಮಿಲಿಗ್ರಾಂ ಪೊಟಾಷಿಯಂ
24 ಮಿಲಿಗ್ರಾಂ ವಿಟಮಿನ್‌ ‘ಸಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT