ADVERTISEMENT

ಗರ್ಭಕ್ಕೆ ತೊಂದರೆ ಕೊಟ್ಟೀತು ಫೈಬ್ರಾಯ್ಡ್

ಅಂಕುರ 100

ಡಾ.ಬೀನಾ ವಾಸನ್
Published 10 ಜೂನ್ 2016, 19:30 IST
Last Updated 10 ಜೂನ್ 2016, 19:30 IST
ಗರ್ಭಕ್ಕೆ ತೊಂದರೆ ಕೊಟ್ಟೀತು ಫೈಬ್ರಾಯ್ಡ್
ಗರ್ಭಕ್ಕೆ ತೊಂದರೆ ಕೊಟ್ಟೀತು ಫೈಬ್ರಾಯ್ಡ್   

*ಗರ್ಭಧಾರಣೆಯ ಸಮಯಕ್ಕೂ ಫೈಬ್ರಾಯ್ಡ್‌ಗಳಿಗೂ ಏನು ಸಂಬಂಧ?
ಶೇ. 2ರಿಂದ ಶೇ.12ರಷ್ಟು ಗರ್ಭಿಣಿಯರಲ್ಲಿ ಫೈಬ್ರಾಯ್ಡ್‌ಗಳು ಕಾಣಿಸಿಕೊಳ್ಳುತ್ತವೆ. ಆದರೆ ಎಲ್ಲ ಫೈಬ್ರಾಯ್ಡ್‌ಗಳೂ ದೊಡ್ಡದಾಗಿ ಬೆಳೆಯುವುದಿಲ್ಲ ಅಥವಾ ತೊಂದರೆಯನ್ನು ಉಂಟುಮಾಡುವುದಿಲ್ಲ. ಒಂದು ವೇಳೆ ಫೈಬ್ರಾಯ್ಡ್‌ಗಳು ಬೆಳೆದರೂ ಅದು ಗರ್ಭಧರಿಸಿದ ಮೊದಲ 12 ವಾರಗಳಲ್ಲಿಯೇ ಆಗುತ್ತದೆ.

*ಗರ್ಭಧಾರಣೆಯ ಸಮಯದಲ್ಲಿ ಫೈಬ್ರಾಯ್ಡ್‌ಗಳಿಂದ ಯಾವ ತೊಂದರೆಗಳು ಎದುರಾಗುತ್ತವೆ?
ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುವ ಫೈಬ್ರಾಯ್ಡ್‌ಗಳಿಂದ ಎದುರಾಗುವ ಆತಂಕವೆಂದರೆ ಅವು ಪೂರ್ವಾವಧಿ ಹೆರಿಗೆಗೋ ಅಥವಾ ಗರ್ಭಪಾತಕ್ಕೋ ಕಾರಣವಾಗುತ್ತವೆಯೆ ಎಂದು.  ರಕ್ತಸಂಚಾರವನ್ನೂ ಮೀರಿ ಬೆಳೆಯುವ ಫೈಬ್ರಾಯ್ಡ್‌ಗಳು ನೋವಿಗೆ ಕಾರಣವಾಗಬಹುದು. ಆಗ ಚಿಕಿತ್ಸೆಗೆ ಆಸ್ಪತ್ರೆಗೇ ದಾಖಲಾಗಬೇಕಾಗುತ್ತದೆ.

ಫೈಬ್ರಾಯ್ಡ್‌ಗಳು ಗರ್ಭಕೋಶದಲ್ಲಿರುವ ಮಗುವಿನ ಸ್ಥಾನವನ್ನು ಪಲ್ಲಟಗೊಳಿಸಬಹುದು. ಇದು ಗರ್ಭಪಾತ, ಅವಧಿಗೆ ಮುನ್ನ ಹೆರಿಗೆ, ಸಿಸೆರಿಯನ್‌ನ ಸಾಧ್ಯತೆಯನ್ನು ಹೆಚ್ಚಿಸಬಹುದು.

ವೈದ್ಯರ ಸಲಹೆಯನ್ನು ಆಧರಿಸಿಯೇ ಫೈಬ್ರಾಯ್ಡ್‌ಗಳಿಗೆ ಚಿಕಿತ್ಸೆ ನಿರ್ಧಾರವಾಗು ವಂಥದ್ದು.  ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಕಡಿಮೆ ಅಥವಾ ಗರ್ಭಧಾರಣೆಯ ಸಮಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡುವುದೂ ವಿರಳ. ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಿದ ಬಳಿಕ ಗರ್ಭ ಧರಿಸಿದ್ದರೆ, ಈ ವಿಷಯವನ್ನು ಪ್ರಸೂತಿತಜ್ಞರಲ್ಲಿ ಚರ್ಚಿಸ ಬೇಕು. ಸಿಸೇರಿಯನ್‌ ಶಸ್ತ್ರಕ್ರಿಯೆಯನ್ನು ಶಿಫಾರಸ್ಸು ಮಾಡಬಹುದು.

ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ಗಳು ಸಂತಾನೋತ್ಪತ್ತಿಯ ಫಲೀಕರಣ ಪ್ರಕ್ರಿಯೆಯನ್ನು ಹಲವು ವಿಧದಲ್ಲಿ ಪ್ರಭಾವಗೊಳಿಸುತ್ತದೆ. ವೀರ್ಯಾಣು ಮತ್ತು ಅಂಡಾಣುಗಳ ಸೇರುವಿಕೆ, ಗರ್ಭ ಕಟ್ಟುವಿಕೆ, ಮಗುವಿನ ಬೆಳವಣಿಗೆ – ಮುಂತಾದುವನ್ನು ಅವು ನಿರ್ಧರಿಸುತ್ತವೆ. ಚಿಕಿತ್ಸೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಚಿಕಿತ್ಸೆಯ ವಿಧಾನಗಳೂ ಅನೇಕ.

ಫೈಬ್ರಾಯ್ಡ್‌ಗಳಿಂದ ತೊಂದರೆಗಳು ಎದುರಾಗುವ ಸಂದರ್ಭಗಳು ಕಡಿಮೆ. ಅವು ಕ್ಯಾನ್ಸರ್‌ಕಾರಕವೂ ಅಲ್ಲ. ಹೀಗಾಗಿ ಗಾಭರಿಯಾಗದೆ ತಾಳ್ಮೆಯಿಂದ ಅವುಗಳ ಬೆಳವಣಿಗೆಯನ್ನು ಗಮನಿಸಬೇಕು. ಅವುಗಳ ಬೆಳವಣಿಗೆಯ ವೇಗವೂ ಕಡಿಮೆ. ಋತುಚಕ್ರ ನಿಂತು, ಸಂತಾನೋತ್ಪತ್ತಿಯ ಹಾರ್ಮೋನ್‌ಗಳು ಇಳಿಮುಳವಾಗುವಾಗ ಅವು ಸಹಜವಾಗಿಯೇ ಮುದುಡುತ್ತವೆ. ಋತುಚಕ್ರಕಾಲದ ರಕ್ತಸ್ರಾವವನ್ನು ಔಷಧಗಳು ಕಡಿಮೆ ಮಾಡಬಲ್ಲವು. ಆದರೆ ಔಷಧಗಳೇ ಫೈಬ್ರಾಯ್ಡ್‌ಗಳನ್ನು ನಾಶಗೊಳಿಸದು.

ಬಾಯಿ ಮೂಲಕ ತೆಗೆದುಕೊಳ್ಳುವ ಗರ್ಭನಿರೋಧಕಗಳು ಅಥವಾ ಪ್ರಾಜಿಸ್ಟನ್‌ಗಳು ಋತುಚಕ್ರಕಾಲದ ರಕ್ತಸ್ರವಾವವನ್ನು ಕಡಿಮೆ ಮಾಡಬಹುದೇ ವಿನಾ ಅವು ಫೈಬ್ರಾಯ್ಡ್‌ಗಳ ಗಾತ್ರವನ್ನು ಕಡಿಮೆ ಮಾಡಲಾರವು. ಕಡಿಮೆ ವ್ಯಾಪ್ತಿ ಯಿರುವ ಫೈಬ್ರಾಯ್ಡ್‌ಗಳನ್ನು ಅಲ್ಟ್ರಾ ಸೌಂಡ್‌ನ ಮೂಲಕವಾಗಿ ನಾಶಗೊಳಿಸ ಬಹುದು. ಶಸ್ತ್ರಚಿಕಿತ್ಸೆಯಿಲ್ಲದೆಯೇ ಫೈಬ್ರಾಯ್ಡ್‌ಗಳನ್ನು ನಾಶಗೊಳಿಸುವ ಹಲವು ಸಾಧ್ಯತೆಗಳೂ ಇವೆ. ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಆಯ್ದುಕೊಳ್ಳಬೇಕು.
ಮಾಹಿತಿಗೆ ಸಂಪರ್ಕಿಸಿ: 18002084444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.