ADVERTISEMENT

ಸಾಂಪ್ರದಾಯಿಕ ಕಬ್ಬಿನ ಗಾಣ

ಬೀರಣ್ಣ ನಾಯಕ ಮೊಗಟಾ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಸಾಂಪ್ರದಾಯಿಕ ಕಬ್ಬಿನ ಗಾಣ
ಸಾಂಪ್ರದಾಯಿಕ ಕಬ್ಬಿನ ಗಾಣ   

‘ಇತಿಹಾಸ ಮರುಕಳಿಸುತ್ತದೆ’ ಎಂಬುದು ಅನುಭವಿಗಳ ಮಾತು. ಅಡುಗೆ ಕೋಣೆಯಿಂದ ಮಾಯವಾಗಿದ್ದ ಮಡಿಕೆ ಮತ್ತೆ ಬಂದಿದೆ. ಗಾಣದಿಂದ ತಯಾರಾದ ಕೊಬ್ಬರಿ ಎಣ್ಣೆ ತಲೆಗೆ ತಂಪೆರಚಲು ಅಣಿಯಾಗಿದೆ. ಪಾಂಡ್ಯ ಭತ್ತದಿಂದ ತಯಾರಾದ ಕುಚಲಕ್ಕಿಗೆ ಕರಾವಳಿ ಜನ ಹುಡುಕಾಟ ನಡೆಸಿದ್ದಾರೆ.

ದೇಶಿ ಆಕಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಅಂತೆಯೆ ಸಾಂಪ್ರದಾಯಿಕ ಕಟ್ಟಿಗೆಯ ಕಬ್ಬಿನ ಗಾಣ ಮರು ಹುಟ್ಟುಪಡೆದಿದೆ. ಈಗಾಗಲೇ ಈ ಬಹೂಪಯೋಗಿ ಕಬ್ಬಿನ ಗಾಣ ಧಾರವಾಡ ಸುತ್ತಲಿನ ಪ್ರದೇಶಗಳಲ್ಲಿ ಬಳಕೆಗೆ ಬಂದಿದೆ.

ಈ ಕಟ್ಟಿಗೆ ಕಬ್ಬಿನ ಗಾಣವನ್ನು ತಯಾರಿಸಲು ಹೆಚ್ಚೆಂದರೆ ಐವತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಕಬ್ಬು ಬೆಳೆದು ಬೆಲ್ಲ ತಯಾರಿಸುವ ಸಣ್ಣ ಸಣ್ಣ ರೈತರಿಂದ ಹಿಡಿದು ಕಬ್ಬಿನ ಹಾಲನ್ನು ತೆಗೆದು ಮಾರಾಟ ಮಾಡುವ ರೈತರಿಗೂ ಇದು ಉಪಯುಕ್ತ. ಕೈಬಲದಿಂದ ತಿರುಗಿಸಬಹುದಾದ ಈ ಗಾಣಕ್ಕೆ ಎತ್ತುಗಳನ್ನು ಕಟ್ಟಿ ಕಬ್ಬನ್ನು ಅರೆಯಬಹುದು.

ADVERTISEMENT

ಗಾಣಕ್ಕೆ ಗಾಲಿಗಳು ಇರುವುದರಿಂದ ಸುಲಭವಾಗಿ ಬೇರೆ ಬೇರೆ ಪ್ರದೇಶಗಳಿಗೆ ಒಯ್ಯಬಹುದು. ವಿದ್ಯುತ್‌, ಡೀಸೆಲ್‌ನ ಹಂಗಿಲ್ಲದೆ ನಡೆಯುವ ಈ ಗಾಣ ಇದೇ ಕಾರಣದಿಂದ ಮತ್ತೆ ಜನಪ್ರಿಯ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.