ADVERTISEMENT

ಅನುರಾಗ್‌ ‘ರುದ್ರ’ ಅವತಾರ!

​ಪ್ರಜಾವಾಣಿ ವಾರ್ತೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಅನುರಾಗ್‌ ‘ರುದ್ರ’ ಅವತಾರ!
ಅನುರಾಗ್‌ ‘ರುದ್ರ’ ಅವತಾರ!   

ಬಾಲಿವುಡ್‌ ಸಿನಿಮಾ ನಿರ್ದೇಶಕ ಅನುರಾಗ್‌ ಕಶ್ಯಪ್ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ನಯನತಾರಾ ಮತ್ತು ಅಥರ್ವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್ ಕತೆಯುಳ್ಳ ಚಿತ್ರ ತಮಿಳಿನ ‘ಇಮಇಕ್ಕ ನೋಡಿಗಲ್‌’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ನ ಕೊನೆಯಲ್ಲಿ ಅನುರಾಗ್‌ ಕಾಣಿಸಿಕೊಂಡಿದ್ದಾರೆ.

ಅನುರಾಗ್ ಅವರ ದಕ್ಷಿಣ ಚಿತ್ರರಂಗ ಪ್ರವೇಶ, ಟೀಸರ್‌ ಬಿಡುಗಡೆ ಆಗುವವರೆಗೂ ಸದ್ದಿಲ್ಲದೇ ಇತ್ತು. ಈಗ ಟೀಸರ್‌ ಬಿಡುಗಡೆ ನಂತರ ಈ ಸುದ್ದಿ ವೈರಲ್ ಆಗಿದ್ದು ಅನುರಾಗ್ ಅಭಿಮಾನಿಗಳು #anuraginKtown ಹ್ಯಾಷ್‌ಟ್ಯಾಗ್‌ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ. ಇದರ ಜೊತೆ ಕೆಲವರು ಅವರ ಕಾಲೂ ಎಳೆದಿದ್ದು  ‘ಅನುರಾಗ್ ನಿರ್ದೇಶನದ ಸಿನಿಮಾ ನೋಡುವುದೇ ಹಿಂಸೆ ಇನ್ನು ಅಭಿನಯ ನೋಡುವುದು ಹೇಗೋ..’ ಎಂದಿದ್ದಾರೆ.

ADVERTISEMENT

ಅನುರಾಗ್ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವುದು ಇದು ಮೊದಲೇನಲ್ಲ. ಈ ಮುಂಚೆ ತಮ್ಮದೇ ನಿರ್ದೇಶನದ ದೇವ್–ಡಿ, ನೋ ಸ್ಮೋಕಿಂಗ್ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಅವರು ದಕ್ಷಿಣ ಭಾರತ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸರಣಿ ಕೊಲೆಗಳ ಸುತ್ತಾ ನಡೆಯುವ ಕುತೂಹಲಕಾರಿ ಕತೆ ಹೊಂದಿರುವ ‘ಇಮಇಕ್ಕ ನೋಡಿಗಲ್‌’ ಚಿತ್ರದಲ್ಲಿ ಅನುರಾಗ್‌ ಅವರು ‘ರುದ್ರ’ ಎಂಬ ಸರಣಿ ಹಂತಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಅಜಯ್‌ ಜ್ಞಾನಮುತ್ತು ನಿರ್ದೇಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.