ADVERTISEMENT

ಅವಳ ನಾಚಿಕೆಗೆ ಮರುಳಾದೆ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
-ಹನುಮಂತ ದುರ್ಗದ, ಪತ್ರಿಕೋದ್ಯಮ ವಿಭಾಗ, ಸೆಂಟ್ರಲ್ ಕಾಲೇಜು
-ಹನುಮಂತ ದುರ್ಗದ, ಪತ್ರಿಕೋದ್ಯಮ ವಿಭಾಗ, ಸೆಂಟ್ರಲ್ ಕಾಲೇಜು   

ನನ್ನ ಈ ವಯಸ್ಸಿನಲ್ಲಿ ಆಕರ್ಷಣೆ ಸಹಜ. ಆದರೂ ನಿಜವಾದ ಪ್ರೀತಿ, ಪ್ರೇಮ ಎಂದರೇನು ಎಂಬ ಗೊಂದಲದಲ್ಲಿ ನಾ ಇದ್ದಾಗ. ನನ್ನ ಬದುಕಿನ ಚಿತ್ರಕ್ಕೆ ಬಣ್ಣ ತುಂಬುವಂತೆ ಅವಳು ಎದುರಾದಳು. ಅಂದು ಪ್ರೇಮಸಾಗರದಲ್ಲಿ ಮುಳುಗಿದ ನನಗೆ ಇಂದಿಗೂ ಏಳಲು ಆಗುತ್ತಿಲ್ಲ.

ಸಾವಿರ ಜನರ ಮಧ್ಯೆ ನಿಂತರೂ  ಅವಳ ಆ ನೋಟ ಹಾಗೂ ಆ ನಾಚಿಕೆ ಆಯಸ್ಕಾಂತದ ವೇಗಕ್ಕಿಂತ ವೇಗವಾಗಿ ನನ್ನನ್ನು ಸೆಳೆಯುತ್ತಿತ್ತು. ಪ್ರತಿನಿತ್ಯ ಅವಳನ್ನು ನೋಡಿದಾಗ ಅದೇನೋ ಹುಮ್ಮಸ್ಸು, ಉತ್ಸಾಹ ನನ್ನಲ್ಲಿ. ನನ್ನ ಕಣ್ಣ ಮುಂದೆ ಅವಳ ಬಿಂಬ ಅರೆಕ್ಷಣ ಕಾಣದೇ ಹೋದಾಗ ಮನದಲ್ಲಿ ಏನೋ ತಳಮಳ, ಗಾಬರಿ.

ಇದು ಆಕರ್ಷಣೆಯೇ ಅಥವಾ ಇದುವೇ ಪ್ರೀತಿಯೇ? ಈ ಗೊಂದಲ ಬಗೆಹರಿಯುವ ಮೊದಲೇ ನಮ್ಮಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತು. ಸ್ನೇಹ ಪ್ರೀತಿಗೆ ತಿರುಗಲು ಬಹುಕಾಲ ಹಿಡಿಯಲಿಲ್ಲ. ಅವಳಾಗಿಯೇ ನನಗೆ ‘ಐ ಲವ್ ಯೂ’ ಎಂದು ಹೇಳಿದ ಆ ಗಳಿಗೆ ನನ್ನ ಮನದಲ್ಲಿ ಇಂದಿಗೂ ಬೆಚ್ಚಗೆ ಮನೆ ಮಾಡಿದೆ.
-ಹನುಮಂತ ದುರ್ಗದ, ಪತ್ರಿಕೋದ್ಯಮ ವಿಭಾಗ, ಸೆಂಟ್ರಲ್ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.