ADVERTISEMENT

ಓಟು ನಮ್‌ ‘ರೈಟು’ ಅರಿವಿರಲಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ನಾಟಕ ಪ್ರದರ್ಶನದ ವೇಳೆ ‘ಪ್ರವರ..’ ತಂಡ
ನಾಟಕ ಪ್ರದರ್ಶನದ ವೇಳೆ ‘ಪ್ರವರ..’ ತಂಡ   

ಈಗ ಎಲ್ಲಡೆ ವಿಧಾನಸಭೆ ಚುನಾವಣೆಯದ್ದೇ ಮಾತು. ರಾಜಕೀಯ ಪಕ್ಷಗಳ ಪ್ರಚಾರ–ಲೆಕ್ಕಾಚಾರಗಳು ಜೋರಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಕ್ಕೀತು? ಎಲ್ಲಿ ಯಾರು ಗೆಲ್ಲಬಹುದು? ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ನಮ್ಮೂರಿನ ಸ್ಫರ್ದಾಳು ಯಾವ ಜಾತಿಯವ? ಹಣ– ಹೆಂಡದ ಹರಿವೆಷ್ಟು? ಹೀಗೆ ಮತ್ತಿತ್ಯಾದಿ ವಿಚಾರಗಳ ಮೇಲಿದೆ ಮತದಾರ ಪ್ರಭುವಿನ ಕಣ್ಣು.

ಈ ವಿಚಾರಗಳನ್ನು ಬದಿಗಿಟ್ಟು ಚುನಾವಣೆಯಲ್ಲಿ ಎಂತಹವರು ಗೆಲ್ಲಬೇಕು ಎಂಬುದನ್ನು ನಿರ್ಧರಿಸಿಕೊಳ್ಳಲು ಸಲಹೆ ನೀಡುವ 'VOTE ನಮ್‌ RIGHT' ಹೆಸರಿನ ಬೀದಿ ನಾಟಕವನ್ನು ಪ್ರವರ ಆರ್ಟ್‌ ಸ್ಟುಡಿಯೊ ತಂಡ ಇತ್ತೀಚೆಗೆ ಪ್ರಸ್ತುತ ಪಡಿಸಿತು.

ADVERTISEMENT

ಕುಡಿಯುವ ನೀರಿನಿಂದ ಹಿಡಿದು ಕೆರೆ ನೀರಿನ ಸಂರಕ್ಷಣೆವರೆಗೆ ವಿವಿಧ ವಿಚಾರಗಳನ್ನು ವಸ್ತುವಾಗಿಸಿಕೊಂಡಿದೆ. ನಗರದ ವಿವಿಧೆಡೆಗಳಲ್ಲಿ ನಿರಂತರವಾಗಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಈಚೆಗೆ ಮತದಾನದ ಮಹತ್ವವನ್ನು ಸಾರಲು ಜಯನಗರದಲ್ಲಿ ಬಣ್ಣ ಹಚ್ಚಿತ್ತು.

ಹನು ರಾಮಸಂಜೀವ ರಚಿಸಿ ನಿರ್ದೇಶಿಸಿರುವ ಈ ನಾಟಕದಲ್ಲಿ ಬ್ರಹ್ಮಗಂಟು ಖ್ಯಾತಿಯ ಅವಿನ್‌, ಗಿರೀಶ್‌ ಅಲಾಜೆ, ಪವನ್‌ ಮಹೇಂದ್ರಕರ್‌, ವೃಷಾಲ್‌ ನಾಯಕ್‌, ಅರುಣ್‌ ಕುಮಾರ್‌, ತೀರ್ಥಲಿಂಗ, ಸುಪ್ರಿಯಾ ಮತ್ತು ದಿವ್ಯ ಪಾಟೀಲ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

‘ಮತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ ಬಿಗಿಯುವವರೆಲ್ಲರೂ ಮತದಾನ ಮಾಡುವುದಿಲ್ಲ. ಚುನಾವಣೆ ಗೆಲ್ಲಲು ಹಣ ಚೆಲ್ಲುವವರು ಅಧಿಕಾರ ಸಿಕ್ಕ ಬಳಿಕ ನಮ್ಮದೇ ಹಣವನ್ನು ಲೂಟಿ ಮಾಡುತ್ತಾರೆ. ಹಾಗಾಗಿ ಜನರು ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯ ಅಭ್ಯರ್ಥಿಗಾಗಿ ಮತ ಚಲಾಯಿಸಬೇಕು’ ಎಂಬುದು ಬೀದಿ ನಾಟಕದ ತಿರುಳು.

ಈಗಾಗಲೇ ಬನಶಂಕರಿ, ಜಯನಗರ, ಹನುಮಂತನಗರ, ಜಯಪ್ರಕಾಶ ನಗರ, ಇಸ್ರೋ ಲೇಔಟ್‌, ವಿದ್ಯಾಪೀಠ ಸರ್ಕಲ್‌, ಎಚ್‌.ಎಸ್‌.ಆರ್‌ ಲೇಔಟ್‌, ಬೆಳ್ಳಂದೂರು ಮತ್ತು ಮಾರತಹಳ್ಳಿಯಲ್ಲಿ ಪ್ರದರ್ಶನ ನೀಡಿರುವ ಈ ತಂಡ ಮೇ 10ರ ವರೆಗೂ ನಗರದಲ್ಲಿ ಪ್ರದರ್ಶನ ಮುಂದುವರೆಸಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886604420 | 9686869676, pravaraartstudiotrust@gmail.com |
hanu.pravara@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.