ADVERTISEMENT

ಕನ್ನಡ ಭಾಷೆ ಮಹತ್ವ ಸಾರುವ ರಾಜು

ಸಿನಿಹನಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಕನ್ನಡ ಭಾಷೆ ಮಹತ್ವ ಸಾರುವ ರಾಜು
ಕನ್ನಡ ಭಾಷೆ ಮಹತ್ವ ಸಾರುವ ರಾಜು   
‘ಫಸ್ಟ್‌ ರ್‌್ಯಾಂಕ್‌ ರಾಜು’ ಈಗ  ಕನ್ನಡ ಮಾಧ್ಯಮ ರಾಜುವಾಗಿ ಬರುತ್ತಿದ್ದಾನೆ. ಹೌದು, ಗುರುನಂದನ್‌ ನಟನೆಯ ‘ರಾಜು ಕನ್ನಡ ಮೀಡಿಯಂ’ ಚಿತ್ರ ಚಿತ್ರೀಕರಣ ಆರಂಭವಾಗಿದೆ. ತೆರೆಗೆ ಬರುವುದಕ್ಕೆ ಎರಡು ತಿಂಗಳು ಬಾಕಿ ಇರುವಂತೆಯೇ ಚಿತ್ರದ ಟೀಸರ್‌ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ  ಗಿಟ್ಟಿಸಿಕೊಳ್ಳುತ್ತಿದೆ.
 
ಗುರುನಂದನ್‌ ನಟನಾಗಿ ಅಭಿನಯಿಸಿದ ‘ಫಸ್ಟ್‌ ರ್‌್ಯಾಂಕ್‌ ರಾಜು’ ಚಿತ್ರ ಭಾರಿ ಯಶಸ್ಸು ಗಳಿಸಿತ್ತು. ಈಗ ‘ರಾಜು ಕನ್ನಡ ಮೀಡಿಯಂ’  ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ  ಟೀಸರ್‌ಅನ್ನು ಯೂಟ್ಯೂಬ್‌ನಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 
 
ಟೀಸರ್‌ ಆರಂಭವಾಗುತ್ತಿದ್ದಂತೆ 2015ರ ಬ್ಲಾಕ್‌ಬಾಸ್ಟರ್‌ ಚಿತ್ರ ಎಂದು  ‘ಫಸ್ಟ್‌ ರ್‌್ಯಾಂಕ್‌ ರಾಜು’ ಚಿತ್ರದ ಹೆಸರನ್ನು ತೋರಿಸುತ್ತಾರೆ. ಜೊತೆಗೆ ಕೆಲವು ಹಾಸ್ಯ ಸನ್ನಿವೇಶಗಳನ್ನೂ ನೋಡಬಹುದು.
 
ಹಳ್ಳಿ ಹುಡುಗನಾಗಿ ಕೆಲಸ ಹುಡುಕಿಕೊಂಡು ಕಂಪೆನಿಯೊಂದಕ್ಕೆ ಹೋಗುವ ರಾಜು ಹಾಗೂ ಕಂಪೆನಿಯ ಮಹಿಳಾ ಉದ್ಯೋಗಿ ಯೊಂದಿಗೆ ನಡೆಯುವ ಸಂಭಾಷಣೆ ಟೀಸರ್‌ನ ಪಂಚಿಂಗ್‌ ವಿಡಿಯೊ ಆಗಿದೆ.
 
‘ಫಸ್ಟ್‌ ರ್‌್ಯಾಂಕ್‌ ರಾಜು ತಂಡವೇ ಈ ಸಿನಿಮಾವನ್ನೂ ಮಾಡಿದೆ. ಸುರೇಶ್‌ ಆರ್ಟ್ಸ್‌ನವರು ಚಿತ್ರ ನಿರ್ಮಿಸಿದ್ದಾರೆ. ರಾಜು ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ. ಹಳ್ಳಿಯಿಂದ ಬೆಂಗಳೂರಿಗೆ ಬಂದು ಕಾಲ್‌ಸೆಂಟರ್‌ ಕಂಪೆನಿಗೆ ಸೇರಿಕೊಳ್ಳುತ್ತಾನೆ. ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗರು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತಿಳಿಸಲಾಗಿದೆ. ಗಂಭೀರ ಸಂದೇಶವೂ ಒಳಗೊಂಡಿದೆ’ ಎನ್ನುತ್ತಾರೆ ನಿರ್ದೇಶಕ  ನರೇಶ್‌ ಕುಮಾರ್‌. 
 
ರೇಡಿಯೊ ಸಿಟಿ ಇಂಡಿಯಾದವರು ಜ.12ರಂದು ಟೀಸರ್‌ಅನ್ನು ಅಪ್‌ಲೋಡ್‌ ಮಾಡಿದ್ದಾರೆ.
 
ರಾಜುಗೆ ಆವಂತಿಕಾ ಶೆಟ್ಟಿ ನಟಿಯಾಗಿದ್ದಾರೆ. ಕಿರಣ್‌ ರವೀಂದ್ರನಾಥ್‌ ಸಂಗೀತವಿದೆ. ಕೆ.ಎ.ಸುರೇಶ್ ಚಿತ್ರವನ್ನು ನಿರ್ಮಿಸಿದ್ದಾರೆ.
ಟೀಸರ್‌ಅನ್ನು 275,992 ಮಂದಿ ವೀಕ್ಷಿಸಿದ್ದಾರೆ.
 
ಯೂಟ್ಯೂಬ್‌ನಲ್ಲಿ  ಟೀಸರ್‌ ನೋಡಲು: http://bit.ly/2iIEyC1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.