ADVERTISEMENT

ಗಡ್ಡಧಾರಿಗಳ ಕಾರುಬಾರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಗಡ್ಡಧಾರಿಗಳ ಕಾರುಬಾರು
ಗಡ್ಡಧಾರಿಗಳ ಕಾರುಬಾರು   

ಚಳಿಗಾಲದ ಮುಂಜಾವಿನಲ್ಲಿ ಕಬ್ಬನ್‌ಪಾರ್ಕ್‌ ನೋಡುವುದೇ ಒಂದು ಚಂದ. ಸುರಿವ ಇಬ್ಬನಿಯಲಿ ಸೂರ್ಯನ ಬೆಳಕು ಬಿಸಿಲುಕೋಲು. ಕಬ್ಬನ್‌ಪಾರ್ಕ್‌ನಲ್ಲಿ ಈ ಸಲದ ಭಾನುವಾರ ಎಂದಿನಂತಿರಲಿಲ್ಲ. ಸೂರ್ಯ ಮೂಡುವ ಮೊದಲೇ ಸೇರಿದ್ದ ಹುಡುಗರ ಉದ್ದನೆಯ ಗಡ್ಡಗಳು ಕ್ಯಾಮೆರಾ ಫ್ಲಾಶ್‌ಗಳಿಗೆ ಮಿರಿಮಿರಿ ಮಿಂಚುತ್ತಿತ್ತು. ಹೇಳಿಕೇಳಿ ಪುರುಷರ ದಿನ ಅಲ್ಲವೇ?

‘ಭಾರತ್ ಬೇರ್ಡ್ ಕ್ಲಬ್‌’ (ಗಡ್ಡಧಾರಿಗಳ ಕ್ಲಬ್) ಆಯೋಜಿಸಿದ್ದ ‘ಬೇರ್ಡೊಥಾನ್’ ಎಂಬ ಗಡ್ಡಧಾರಿಗಳಿಗೆಂದೇ ಮೀಸಲಿದ್ದ ಜಾಗೃತಿ ಓಟದಲ್ಲಿ ಸುಮಾರು 700 ಮಂದಿ ಪಾಲ್ಗೊಂಡಿದ್ದರು. 10 ಕಿ.ಮೀ., ಮತ್ತು 5 ಕಿ.ಮೀ. ವಿಭಾಗಗಳಲ್ಲಿ ಬೆಳಿಗ್ಗೆ 6.30ರಿಂದ 9ರವರೆಗೆ ಪುರುಷಸಿಂಹಗಳು ಓಡಿದಣಿದವು.

ಪುರುಷರ ಆರೋಗ್ಯ ಮತ್ತು ವೃಷಣ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ನೋ ಶೇವ್ ನವೆಂಬರ್’ (ಮೊವೆಂಬರ್‌) ಆಚರಿಸಲಾಗುತ್ತದೆ. ಗಡ್ಡಮೀಸೆಗಳಿಗೆ ಬ್ಲೇಡ್ ತಾಗಿಸದೇ ಮಾಹಿತಿ ಹರಡುವುದು ಈ ಅಭಿಯಾನದ ಉದ್ದೇಶ. ಅಭಿಯಾನಕ್ಕೆ ಬೆಂಬಲ ಸೂಚಿಸಿ ಕೆಲ ಮಹಿಳೆಯರೂ ಪಾಲ್ಗೊಂಡಿದ್ದುದು ಈ ವರ್ಷದ ವಿಶೇಷ.

ADVERTISEMENT

‘ಸಾವಿರಕ್ಕೂ ಹೆಚ್ಚು ಮಂದಿ ಓಟದಲ್ಲಿ ಪಾಲ್ಗೊಳ್ಳುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಎಲ್ಲ ವಯೋಮಾನದವರೂ ಪಾಲ್ಗೊಂಡಿದ್ದರು. ಅಭಿಯಾನದ ಭಾಗವಾಗಿ ನಗರದ ಯುಬಿ ಸಿಟಿಯಲ್ಲಿ ನ.26ರಂದು ಗಡ್ಡ ಮತ್ತು ಮೀಸೆಯ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ’ ಎಂದು ಖುಷಿ ಹಂಚಿಕೊಂಡರು ಬೇರ್ಡ್‌ ಕ್ಲಬ್‌ನ ವಿಶಾಲ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.