ADVERTISEMENT

ದೀಪಿಕಾ ಸಿನಿಮಾ ಲೋಗೊ ಜಾಹೀರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2016, 19:30 IST
Last Updated 15 ಜುಲೈ 2016, 19:30 IST
ದೀಪಿಕಾ ಸಿನಿಮಾ ಲೋಗೊ ಜಾಹೀರು
ದೀಪಿಕಾ ಸಿನಿಮಾ ಲೋಗೊ ಜಾಹೀರು   

ಹಾಲಿವುಡ್‌ಗೆ ಜಿಗಿದಿರುವ ನಟಿ ದೀಪಿಕಾ ಪಡುಕೋಣೆ ತಮ್ಮ ‘ಎಕ್ಸ್‌ಎಕ್ಸ್‌ಎಕ್ಸ್‌: ದ ರಿಟರ್ನ್‌ ಆಫ್‌ ಕ್ಸೆಂಡರ್‌ ಕೇಜ್‌’ ಸಿನಿಮಾದ ಲೋಗೊ ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾದಲ್ಲಿ ವಿನ್‌ ಡೀಸೆಲ್‌ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ದೀಪಿಕಾ ಇತ್ತಿಚೆಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಆ್ಯನಿಮೇಟೆಡ್‌ ಲೋಗೊ ಹಂಚಿಕೊಂಡಿದ್ದಾರೆ. ಬೆಳ್ಳಿ ಬಣ್ಣದ ಮೇಲೆ ದೀಪಿಕಾ ಚಿತ್ರವಿದೆ. ಅದರ ಮೇಲೆಯೇ ‘ಐ ಡೋಂಟ್‌ ಬಿಲೀವ್‌ ಇನ್‌ ಗುಡ್‌ ಗೈಸ್‌’ (ಒಳ್ಳೆಯ ಹುಡುಗರ ಮೇಲೆ ನನಗೆ ನಂಬಿಕೆ ಇಲ್ಲ) ಎಂಬ ಕೆಂಪು ಬಣ್ಣದ ಅಕ್ಷರಗಳು ಮೂಡಿವೆ.

ಈ ಲೋಗೊ ಹಿನ್ನೆಲೆಯಲ್ಲಿ ಡೀಸೆಲ್‌ ಅವರ ಗಡಸು ಧ್ವನಿಯೂ ಕೇಳಿ ಬರುತ್ತದೆ. ‘ಜಗತ್ತು ಬದಲಾಗಿದೆ. ಕುಶಲ ಮತ್ತು ಗಟ್ಟಿ ಮನಸ್ಥಿತಿಯ ಜನರು ಬೇಕಾಗಿದ್ದಾರೆ. ನಮಗೆ ಬೇರೆಯದೇ ರೀತಿಯ ಸೈನಿಕರು ಬೇಕು’ ಎಂದು ಅವರು ಗುಡುಗುತ್ತಾರೆ.

ಸಿನಿಮಾ ತಾರಾಗಣದಲ್ಲಿ ರೂಬಿ ರೋಸ್‌, ಸ್ಯಾಮ್ಯುಯೆಲ್‌ ಎಲ್‌. ಜಾಕ್ಸನ್‌, ಡೋನಿ ಯೆನ್‌, ಟೋನಿ ಜಾ ಇತರರಿದ್ದಾರೆ. 2017ರ ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.