ADVERTISEMENT

ನೃತ್ಯ ಶ್ರದ್ಧೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 19:42 IST
Last Updated 27 ಏಪ್ರಿಲ್ 2015, 19:42 IST

ನೃತ್ಯ ಪ್ರಧಾನ ಸಿನಿಮಾ ‘ಎಬಿಸಿಡಿ 2’ ಚಿತ್ರದಲ್ಲಿ ನಟಿ ಶ್ರದ್ಧಾ ಕಪೂರ್‌ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವ ರೀತಿಯಲ್ಲಿ ಡಾನ್ಸ್‌ ಮಾಡಿದ್ದಾರೆ. ಈಚೆಗೆ ಬಿಡುಗಡೆಗೊಂಡ ಚಿತ್ರದ ಟ್ರೈಲರ್‌ ನೋಡಿದ ನೃತ್ಯಾಭಿಮಾನಿಗಳು ಕೂಡ ಶ್ರದ್ಧಾ ನೃತ್ಯವನ್ನು ಮನಸಾರೆ ಹೊಗಳುತ್ತಿದ್ದಾರೆ.

‘ಎಬಿಸಿಡಿ 2 ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ನನಗೆ ನೃತ್ಯ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನುಭವ ನೀಡಿತು’ ಎನ್ನುವ ಶ್ರದ್ಧಾ, ಈ ಚಿತ್ರದಲ್ಲಿನ ತಮ್ಮ ಪಾತ್ರ ನಿರ್ವಹಣೆಗಾಗಿ ಸಾಕಷ್ಟು ಶ್ರಮ ಹಾಕಿದ್ದಾರಂತೆ.

‘ಈ ಚಿತ್ರಕ್ಕಾಗಿ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಗಟ್ಟಿಗೊಳ್ಳಲು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆ. ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೆ. ಡಾನ್ಸ್‌ ಮಾಡುವ ಕೆಲವು ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡು ನೋವು ತಿಂದಿದ್ದೇನೆ’ ಎನ್ನುತ್ತಾರೆ ಶ್ರದ್ಧಾ.

ಇದೇ ವೇಳೆ ನಟ ಪ್ರಭುದೇವ ಹಾಗೂ ರೆಮೊ ಅವರ ನೃತ್ಯ ಲಾಲಿತ್ಯ ಕಂಡು ಶ್ರದ್ಧಾ ಕಪೂರ್‌ ಬೆಕ್ಕಸ ಬೆರಗಾಗಿದ್ದರಂತೆ. ಹಾಗಾಗಿ, ಶ್ರದ್ಧಾ ಹೇಳುವಂತೆ, ಇವರಿಬ್ಬರೂ ಡಾನ್ಸ್‌ ಗುರುಗಳಿದ್ದಂತೆ. ‘ರೆಮೊ ಹಾಗೂ ಪ್ರಭುದೇವ ಸರ್‌ ಈಗ ನನ್ನ ನೃತ್ಯಗುರುಗಳು.

ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ನಾನು ಮತ್ತು ವರುಣ್‌, ಡಾನ್ಸ್‌ಗೆ ಸಂಬಂಧಿಸಿದಂತೆ ಸಾಕಷ್ಟು ಕೌಶಲ ಹಾಗೂ ಸಂಗತಿಯನ್ನು ತಿಳಿದುಕೊಂಡಿದ್ದೇವೆ. ನಾವು ಏನೇ ಕಲಿತಿದ್ದರೂ ಅದರ ಗೌರವ ಇಬ್ಬರೂ ಗುರುಗಳಿಗೆ ಸಲ್ಲುತ್ತದೆ’ ಎನ್ನುವ ಶ್ರದ್ಧಾ, ತಮ್ಮಅಭಿಮಾನ ತುಂಬಿದ ಮಾತಿನ ಮೂಲಕವೇ  ಗುರುಕಾಣಿಕೆ ಸಲ್ಲಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.