ADVERTISEMENT

‘ಬಾಲಿವುಡ್‌ ಪಾರ್ಟಿ ಅಂದ್ರೆ ಗಾಸಿಪ್‌, ಸಾರಾಯಿ ಅಷ್ಟೇ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
‘ಬಾಲಿವುಡ್‌ ಪಾರ್ಟಿ ಅಂದ್ರೆ ಗಾಸಿಪ್‌, ಸಾರಾಯಿ ಅಷ್ಟೇ’
‘ಬಾಲಿವುಡ್‌ ಪಾರ್ಟಿ ಅಂದ್ರೆ ಗಾಸಿಪ್‌, ಸಾರಾಯಿ ಅಷ್ಟೇ’   

ನೇರವಂತಿಕೆಗೆ ಹೆಸರಾದ ಸನ್ನಿ ದೇವಲ್‌ ಅವರ ಮಾತೊಂದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

‘ಬಾಲಿವುಡ್‌ಗೆ ಸಂಬಂಧಿಸಿದ ಯಾವುದೇ ಪಾರ್ಟಿ ಆಗಿರಲಿ ಅಲ್ಲಿ ಕೇವಲ ಮದ್ಯ ಮತ್ತು ಗಾಸಿಪ್ ಮಾತ್ರವೇ ಇರುತ್ತೆ. ಹೀಗಾಗಿಯೇ ನಾನು ಇಂಥ ಪಾರ್ಟಿಗಳಿಗೆ ಹೋಗುವುದಿಲ್ಲ. ಸಿನಿಮಾಕ್ಕೆ ಬಂದ ಪ್ರಾರಂಭದಲ್ಲಿ ಪಾರ್ಟಿಗಳಿಗೆ ನಾನು ಹೋಗುತ್ತಿರಲಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಿದರು. ಆದರೆ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಕ್ರಮೇಣ ನಾನು ಇರುವುದು ಹೀಗೆ ಎಂದು ತಿಳಿದು ಸುಮ್ಮನಾದರು’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ‘ಪೋಸ್ಟರ್‌ ಬಾಯ್ಸ್‌’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಅವರು ‘ಪಾರ್ಟಿಗಳಲ್ಲಿ ಭಾಗವಹಿಸದೇ ಇರುವುದು ಆಟಿಟ್ಯೂಡ್‌ ಸಮಸ್ಯೆ ಎಂದುಕೊಳ್ಳಬೇಕಿಲ್ಲ. ನನಗೆ ಪಾರ್ಟಿ, ಅಲ್ಲಿಯ ವಾತಾವರಣ ಅಷ್ಟಾಗಿ ಇಷ್ಟವಾಗುವುದಿಲ್ಲ’ ಎಂದಿದ್ದಾರೆ.

ADVERTISEMENT

ಅವರಿಗೆ ಪ್ರಶಸ್ತಿ, ಗೌರವಗಳ ಬಗ್ಗೆಯೂ ಅಂಥ ಒಲವು ಇಲ್ಲ. ‘ನಾವು ಮಾಡಿದ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುವುದೇ ದೊಡ್ಡ ಪ್ರಶಸ್ತಿ. ನಿಮ್ಮ ಪಾತ್ರ ನೋಡಿ ನನ್ನ ಮಗ ಸೈನ್ಯ ಸೇರಿದ ಎನ್ನುವ ಮಾತನ್ನೂ ಕೆಲವರು ಬಂದು ಹೇಳಿದ್ದಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ?' ಎನ್ನುವುದು ಅವರ ಪ್ರಶ್ನೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.