ADVERTISEMENT

ಬಿಸಿಲು–ಬದುಕು

ಚಂದ್ರಹಾಸ ಕೋಟೆಕಾರ್
Published 1 ಮೇ 2016, 19:44 IST
Last Updated 1 ಮೇ 2016, 19:44 IST
ಬಿಸಿಲು–ಬದುಕು
ಬಿಸಿಲು–ಬದುಕು   

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 39 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 85 ವರ್ಷಗಳಲ್ಲಿ ಏಪ್ರಿಲ್‌ ತಿಂಗಳಿನ ಗರಿಷ್ಠ ದಾಖಲೆಯಾಗಿದೆ. ಮನೆಯಲ್ಲಿನ ಸೀಲಿಂಗ್ ಫ್ಯಾನ್‌ ಕೂಡ ಬಿಸಿಗಾಳಿಯನ್ನೇ ಬೀಸುತ್ತಿದೆ.

ನಗರದ ಜನತೆ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಬಾಲಕ ತಣ್ಣೀರಿನ ಮಜ್ಜನದ ಮೊರೆಹೋಗಿದ್ದಾನೆ. ಬಾಯಾರಿದ ಮಂಗ ಖಾಲಿ ಲೋಟ ಹಿಡಿದು ಹನಿ ನೀರಿಗಾಗಿ ಪರಿತಪಿಸುತ್ತಿದೆ, ಹೊಟ್ಟೆಪಾಡಿಗಾಗಿ ಬುಟ್ಟಿ ಹೆಣೆಯುವ ಮಹಿಳೆಯೂ ಛತ್ರಿಯ ಮೊರೆಹೋಗಿದ್ದಾಳೆ.

ಆಕೆಯ ಹಿಂದೆ ತಲೆ ಮೇಲೆ ಕರವಸ್ತ್ರ ಹಾಕಿಕೊಂಡ ವ್ಯಕ್ತಿ ಸಹ ನೆರಳಿಗಾಗಿ ಪರದಾಡುತ್ತಿದ್ದಾನೆ. ಮರಗಳೇ ಇಲ್ಲದ ನಗರದಲ್ಲಿ ಸಿಕ್ಕ ಒಂದು ಮರದಡಿಯಲ್ಲೇ  ನಿದ್ರೆಗೆ ಜಾರಿರುವ ವ್ಯಕ್ತಿ. ಹೀಗೆ ‘ಬಿಸಿಲು–ಬದುಕು’ ನಡುವಿನ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಚಂದ್ರಹಾಸ ಕೋಟೆಕಾರ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.