ADVERTISEMENT

ಮತ್ತೆ ಒಂದಾದ ಕರಣ್ ಮತ್ತು ಕಾಜೊಲ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2017, 19:30 IST
Last Updated 11 ಆಗಸ್ಟ್ 2017, 19:30 IST
ಮತ್ತೆ ಒಂದಾದ ಕರಣ್ ಮತ್ತು ಕಾಜೊಲ್
ಮತ್ತೆ ಒಂದಾದ ಕರಣ್ ಮತ್ತು ಕಾಜೊಲ್   

ಕರಣ್ ಜೋಹರ್ ಮತ್ತು ಕಾಜೋಲ್ ನಡುವಿನ ಗೆಳೆತನ ಮತ್ತೆ ಚಿಗುರೊಡೆಯುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. ಕರಣ್  ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದ ತಮ್ಮ ಮಕ್ಕಳ ಚಿತ್ರಕ್ಕೆ ನಟಿ ಕಾಜೋಲ್ ಲೈಕ್ ಒತ್ತಿದ್ದರೆ ಕರಣ್, ಕಾಜೋಲ್ ಅವರ ಖಾತೆಯನ್ನು ಫಾಲೊ ಮಾಡಿದ್ದಾರೆ. ಬಹುಕಾಲಗಳಿಂದ ಗೆಳೆಯರಾಗಿದ್ದ ಇವರು ಕಳೆದ ವರ್ಷ ಪರಸ್ಪರ ಮುನಿಸಿಕೊಂಡು ದೂರಾಗಿದ್ದರು.

ಕಳೆದ ವರ್ಷ ಕಾಜೋಲ್ ಪತಿ ಅಜಯ್ ದೇವಗನ್ ಹಾಗೂ ಕರಣ್ ನಿರ್ದೇಶನದ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಸಮಯದಲ್ಲಿ ಅಜಯ್‌ದೇವಗನ್, ಕರಣ್‌ ಜೋಹರ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ಇದಕ್ಕೆ ಕರಣ್ ನೀಡಿದ ಪ್ರತಿಕ್ರಿಯೆಯೂ ಖಾರವಾಗಿಯೇ ಇತ್ತು.

ಈ ಸಮಯದಲ್ಲಿ ಪತಿಯ ಬೆಂಬಲಕ್ಕೆ ನಿಂತ ಕಾಜೋಲ್‌ ಕರಣ್ ಅವರನ್ನು ದೂಷಿಸಿ ಮಾತನಾಡಿದ್ದರು. ಆದರೆ ಇತ್ತೀಚೆಗೆ ಶಾರುಖ್, ಸಲ್ಮಾನ್ ಖಾನ್ ಈ ಗೆಳೆಯರನ್ನು ಮತ್ತೆ ಒಂದಾಗಿಸುವ ಪ್ರಯತ್ನ ಮಾಡಿದ್ದು ಅದು ಸಫಲವಾಗಿದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.