ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಬಾಲಿವುಡ್ನ ಸುಂದರ ಜೋಡಿಗಳಲ್ಲೊಂದು. ಈಗ ಮೀರಾ ರಜಪೂತ್ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂಬ ಸಂಗತಿಯನ್ನು ಶಾಹಿದ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಎರಡು ವರ್ಷದ ಮಿಶಾ ಎಂಬ ಹೆಣ್ಣುಮಗುವಿದೆ. ‘ಮಿಶಾ ಶೀಘ್ರದಲ್ಲೇ ದೊಡ್ಡ ಅಕ್ಕ ಆಗುತ್ತಿದ್ದಾಳೆ’ ಎಂಬ ಬರಹ ಹಾಗೂ 5 ಬಲೂನುಗಳ ಚಿತ್ರ ಬಿಡಿಸಿ, ಅದರ ಪಕ್ಕದಲ್ಲಿ ಮಿಶಾ ಇರುವ ಚಿತ್ರವನ್ನು ಶಾಹಿದ್ ಹಂಚಿಕೊಂಡಿದ್ದಾರೆ.
ಈಚೆಗೆ ಮೀರಾ ರಜಪೂತ್ ತಮ್ಮ ಸ್ನೇಹಿತೆ ಜೊತೆ ಮುಂಬೈನ ರೆಸ್ಟೊರೆಂಟ್ಗೆ ಹೋಗಿದ್ದಾಗ ಸಡಿಲವಾದ ಬಟ್ಟೆ ತೊಟ್ಟಿದ್ದರು. ಆ ಬಟ್ಟೆಯಲ್ಲಿ ಅವರ ಉಬ್ಬಿರುವ ಹೊಟ್ಟೆ ಕಾಣಿಸುತ್ತಿದ್ದರಿಂದ ಮೀರಾ ಗರ್ಭಿಣಿಯಾಗಿರಬೇಕು ಎಂಬ ಗಾಳಿಸುದ್ದಿಗಳು ಹರಿದಾಡಿದ್ದವು. ಈಗ ಸಾಮಾಜಿಕ ಜಾಲತಾಣ ಮೂಲಕ ಈಗ ಶಾಹಿದ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.