ADVERTISEMENT

ಮದುವೆಯ ದಿನದ ಸಿಂಗಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST
ಮದುವೆಯ ದಿನದ ಸಿಂಗಾರ
ಮದುವೆಯ ದಿನದ ಸಿಂಗಾರ   

ಹೆಣ್ಣು ಅಲಂಕಾರ ಪ್ರಿಯೆ ಎಂಬ ಮಾತಿದೆ. ಮದುವೆ ಎಂದಾಗ ಅವಳಲ್ಲಿನ ಸೌಂದರ್ಯಪ್ರಜ್ಞೆ ಇನ್ನಷ್ಟು ಜಾಗೃತವಾಗುತ್ತದೆ. ಮುಖದ ಸೌಂದರ್ಯ, ಕೂದಲಿನ ಆರೈಕೆಯ ಜತೆಗೆ ಯಾವ ರೀತಿ ಹೇರ್‌ಸ್ಟೈಲ್‌ ಮಾಡಿದರೆ ಚೆಂದ ಕಾಣುತ್ತೇವೆ ಎಂಬುದರ ಕುರಿತು ಮೊದಲೇ ಪಟ್ಟಿ ಸಿದ್ಧವಾಗುತ್ತದೆ. ಅದರಲ್ಲೂ ಬಾಲಿವುಡ್‌ ನಟಿಯರು ಎಂದರೆ ಕೇಳಬೇಕೆ? ಅವರ ಕೇಶ ವಿನ್ಯಾಸ, ಉಡುಪು ವಿನ್ಯಾಸ ಮಾಡಲು ವಿನ್ಯಾಸಗಾರರು ಇವರಿಗಿಂತ ಮೊದಲೇ ತಯಾರಿಯಲ್ಲಿ ನಿರತರಾಗಿರುತ್ತಾರೆ. ಒಂದಷ್ಟು ನಟಿಯರು ತಮ್ಮ ಮದುವೆ ದಿನ ಮಾಡಿಸಿಕೊಂಡ ನವೀನ ಕೇಶವಿನ್ಯಾಸದ ಕುರಿತು ಮಾಹಿತಿ ಇಲ್ಲಿದೆ.

ಇಶಾ ಡಿಯೋಲ್
ಮಾಮಾಲಿನಿಯ ಮುದ್ದಿನ ಮಗಳು ಇಶಾ ಡಿಯೋಲ್ ತಮ್ಮ ಮದುವೆಯ ದಿನ ನೋಡುವುದಕ್ಕೆ ಸಿಂಪಲ್ ಆದರೂ ಆಕರ್ಷಕ ಕೇಶವಿನ್ಯಾಸ ಮಾಡಿಕೊಂಡಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟದೆ ನೆತ್ತಿಯ ಮಧ್ಯದ ಒಂದಷ್ಟು ಕೂದಲನ್ನು ಎತ್ತರಿಸಿ ಕ್ಲಿಪ್‌ ಹಾಕಿಕೊಂಡಿದ್ದ ಇಶಾ, ಎಡ ಮತ್ತು ಬಲಗಡೆ ಕಿವಿಯ ಪಕ್ಕ ಸುರುಳಿ ಸುತ್ತಿದ ಕೂದಲನ್ನು ಇಳಿಬಿಟ್ಟಿದ್ದರು. ಇವರು ನೆತ್ತಿ ಬೊಟ್ಟಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದರಿಂದ ಈ ಹೇರ್‌ಸ್ಟೈಲ್‌ನಲ್ಲಿ ತುಂಬ ಮುದ್ದಾಗಿ ಕಾಣಿಸಿಕೊಂಡಿದ್ದರು.

ದಿಯಾ ಮಿರ್ಜಾ
ನಟಿ ದಿಯಾ ಮಿರ್ಜಾ ಕೂದಲನ್ನು ಇಳಿಬಿಟ್ಟಿದ್ದರಿಂದ ನೀಲಿಬಣ್ಣದ ಡ್ರೆಸ್‌ನಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದರು. ತಮ್ಮ ಉದ್ದ ಕೂದಲನ್ನು ದಿಯಾ ಸುರುಳಿ ಸುರುಳಿಯಾಗಿ ಮಾಡಿಕೊಂಡಿದ್ದರು. ನೋಡುವುದಕ್ಕೆ ಸಿಂಪಲ್ ಹೇರ್‌ಸ್ಟೈಲ್‌ ಆಗಿ ಕಂಡರೂ, ದಿಯಾ ಇದರಲ್ಲಿ ಮಿಂಚಿದ್ದು ಮಾತ್ರ ಸುಳ್ಳಲ್ಲ.

ಲಾರಾ ದತ್ತ
ಲಾರಾ ದತ್ತ ಅವರದ್ದು ಕ್ರಿಶ್ಚಿಯನ್ ಸಂಪ್ರದಾಯದ ಮದುವೆ. ಬಿಳಿ ಬಣ್ಣದ ಗೌನ್‌ ಧರಿಸಿದ್ದ ಅವರ ಹೇರ್‌ಸ್ಟೈಲ್‌ ಚೆನ್ನಾಗಿತ್ತು. ಎಲ್ಲ ಕೂದಲನ್ನು ಒಟ್ಟು ಸೇರಿಸಿ ನೆತ್ತಿಯ ಮೇಲೆ ಬರುವಂತೆ ಕೇಶವಿನ್ಯಾಸ ಮಾಡಿ ಕೊಂಡಿದ್ದರು. ಜತೆಗೆ ಕೂದಲಿಗೆ ಬೆಳ್ಳಿಯ ಆಭರಣ  ಸುತ್ತಿ ಕೊಂಡಿದ್ದರು.

ADVERTISEMENT

ಶಿಲ್ಪಾ ಶೆಟ್ಟಿ
ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಮದುವೆಯಾದ ಶಿಲ್ಪಾ ಶೆಟ್ಟಿ ಸ್ಟೋನ್‌ ವರ್ಕ್ ಇರುವ ಬಾದಾಮಿ ಬಣ್ಣದ ದಿರಿಸಿನಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದರು. ಇದರ ಜತೆಗೆ ಅವರ ಕೇಶವಿನ್ಯಾಸ ಕೂಡ ಚೆನ್ನಾಗಿತ್ತು. ಕೂದಲನ್ನು ಸುರುಳಿಯಾಗಿ ಸುತ್ತಿ ವಿಭಿನ್ನವಾಗಿ ವಿನ್ಯಾಸ ಮಾಡಿಕೊಂಡಿದ್ದ ಶಿಲ್ಪಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.