ADVERTISEMENT

ವೈವಿಧ್ಯಕ್ಕೆ ಹೊಸ ವ್ಯಾಖ್ಯಾನ

ಸುಬ್ರಹ್ಮಣ್ಯ ಎಚ್.ಎಂ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ವೈವಿಧ್ಯಕ್ಕೆ ಹೊಸ ವ್ಯಾಖ್ಯಾನ
ವೈವಿಧ್ಯಕ್ಕೆ ಹೊಸ ವ್ಯಾಖ್ಯಾನ   

ಸಮಕಾಲೀನ ಜಗತ್ತನ್ನು ಕಲಾಪ್ರಜ್ಞೆಯೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನದಲ್ಲಿ ಹಲವು ಕಲಾವಿದರು ತೊಡಗಿಸಿಕೊಂಡಿದ್ದಾರೆ. ಇಂಥವರ ಪಟ್ಟಿಯಲ್ಲಿ ಬರೋಡಾದ ಅವಿನಾಶ್‌ ಗೊಂಡಾಲಿಯಾ, ಭೋಪಾಲ್‌ನ ಬಂದನಾ ಕುಮಾರಿ ಮತ್ತು ದೆಹಲಿಯ ಸುಚಿತ್‌ ಸಾಹ್ನಿ ಸಹ ಸೇರಿದ್ದಾರೆ.

ಅವಿನಾಶ್‌ ಗೊಂಡಾಲಿಯಾ ಅವರ ಕಲಾಕೃತಿಗಳಿಗೆ 21ನೇ ಶತಮಾನದ ಯಂತ್ರ ನಾಗರಿಕತೆ ಪ್ರತಿನಿಧಿಸುವ ತಲೆಮಾರೇ ಸ್ಫೂರ್ತಿ. ಮನುಷ್ಯ ಮತ್ತು ಯಂತ್ರಗಳು ಒಂದೇ ಬಗೆಯಲ್ಲಿ ಇರುವುದನ್ನು ಅವರ ಕಲಾಕೃತಿಗಳು ಬಿಂಬಿಸುತ್ತವೆ.

ಬಂದನಾ ಕುಮಾರಿ ಅವರ ಚಿತ್ರಕಲೆ ಮಹಿಳೆಯು ದೇವರ ಅಪೂರ್ವ ಸೃಷ್ಟಿ ಎನ್ನುವುದನ್ನು ಸಮರ್ಥವಾಗಿ ಬಿಂಬಿಸುತ್ತವೆ. ಪಕ್ಷಿ, ಸೂರ್ಯ, ಚಂದ್ರ, ತಾರೆಗಳಾಗಿ ಮಹಿಳೆಯರು ಅವರ ಕಲಾಕೃತಿಗಳಲ್ಲಿ ಮೈದಾಳಿದ್ದಾರೆ.

ADVERTISEMENT

ಸುಚಿತ್‌ ಸಾಹ್ನಿ ಅವರ ಕಲಾಕೃತಿಗಳಲ್ಲಿ ಸಮಕಾಲೀನ ವಿದ್ಯಮಾನಗಳೇ ಮೇಲುಗೈ. ನಿತ್ಯದ ಅನುಭವದ ಸತ್ಯ ಘಟನೆಗಳು ಅವರ ಕಲೆಯಲ್ಲಿ ದಾಖಲಾಗಿವೆ. ಮನುಷ್ಯರು ತನ್ನ ಸುತ್ತಲಿನ ಘಟನೆಗಳಿಗೆ ಹೇಗೆ ಸ್ಪಂದಿಸುತ್ತಾರೆ, ಪರಸ್ಪರ ಸಂಬಂಧಗಳು ಹೇಗಿರುತ್ತವೆ ಎನ್ನುವ ಪ್ರಶ್ನೆಗಳನ್ನು ಇವರ ಕಲಾಕೃತಿಗಳು ಪ್ರಸ್ತಾಪಿಸುತ್ತವೆ.

ಕಲಾಕೃತಿ ಪ್ರದರ್ಶನವು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ‘ರಿಡಲ್‌ ಆಫ್‌ ಕಲರ್ಸ್‌’ ಹೆಸರಿನಲ್ಲಿ ನಡೆಯುತ್ತಿದೆ. ಶಿಲ್ಪಾ ದುಗರ್ ಮತ್ತು ಮೀನಾ ದಧಾ ಅವರ ಕ್ರಿಸಲಾ ಆರ್ಟ್ಸ್‌ ವತಿಯಿಂದ ಈ ಪ್ರದರ್ಶನ ನಡೆಯುತ್ತಿದ್ದು, ವಿನ್ಯಾಸ ಮತ್ತು ವಸ್ತು ವಿಷಯಗಳಲ್ಲಿ ವೈಶಿಷ್ಟತೆ ಮೈಗೂಡಿಸಿಕೊಂಡಿರುವ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಅಪರೂಪದ ಕಲಾಕೃತಿಗಳ ಪ್ರದರ್ಶನ ಇದಾಗಿದೆ.

‘ಲಂಡನ್‌, ನ್ಯೂಯಾರ್ಕ್‌, ಮಲೇಷ್ಯಾ ದುಬೈ ಮತ್ತು ನೇಪಾಳದಲ್ಲೂ ಸಂಸ್ಥೆ ಯಶಸ್ವಿಯಾಗಿ ಕಲಾ ಪ್ರದರ್ಶನ ಏರ್ಪಡಿಸಿದೆ. ಕಲಾವಿದರು ಮತ್ತು ಕಲಾಭಿಮಾನಿಗಳು ಪರಸ್ಪರ ಮುಖಾಮುಖಿಯಾಗಲು ಅಪೂರ್ವ ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರದರ್ಶನದಲ್ಲಿ ಒಟ್ಟು 25 ಯುವ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿವೆ ಎನ್ನುತ್ತಾರೆ ಕ್ರಿಸಲಾ ಆರ್ಟ್ಸ್‌ನ ಸ್ಥಾಪಕಿ ಶಿಲ್ಪಾ ದುಗಾರ್‌.

***

ಕಲಾ ಪ್ರದರ್ಶನ

ಸ್ಥಳ: ತಾಜ್ ವೆಸ್ಟ್ ಎಂಡ್ ಹೋಟೆಲ್‌ನ ಆರ್ಟ್ ಕಾರಿಡಾರ್‌
ಸಮಯ: ಬೆಳಿಗ್ಗೆ 11ರಿಂದ ಸಂಜೆ 7, ನ.27 ಕೊನೆಯ ದಿನ
ಪ್ರವೇಶ: ಉಚಿತ
ಮಾಹಿತಿ: 8105365798

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.