ADVERTISEMENT

ವ್ಯಾಲೆಂಟೈನ್ಸ್ ಉಡುಗೊರೆಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2015, 19:30 IST
Last Updated 10 ಫೆಬ್ರುವರಿ 2015, 19:30 IST
ವ್ಯಾಲೆಂಟೈನ್ಸ್ ಉಡುಗೊರೆಗಳು
ವ್ಯಾಲೆಂಟೈನ್ಸ್ ಉಡುಗೊರೆಗಳು   

ಪ್ರೇಮಿಗಳ ದಿನಕ್ಕಾಗಿ ಆರ್ಚೀಸ್ ಅತ್ಯಾಕರ್ಷಕ ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ಪರಿಚಯಿಸಿದೆ. ‘ವ್ಯಾಲೆಂಟೈನ್ಸ್ 2015’ ರಲ್ಲಿ 182 ಗ್ರೀಟಿಂಗ್ ಕಾರ್ಡ್‌ಗಳ ಸಂಗ್ರಹವಿದೆ. ಕಾರ್ಡ್‌ಗಳನ್ನು ಹೊರತುಪಡಿಸಿ ಹೊಸ ಉಡುಗೊರೆಗಳನ್ನೂ ಆರ್ಚೀಸ್ ಪರಿಚಯಿಸಿದೆ. 

‘ಲವ್ ಯು ದಿಸ್ ಮಚ್’ ಪಪ್ಪಿ ಮತ್ತು ‘ವಿತ್ ಯು ಆಲ್‍ವೇಸ್’ ಎಂಬ ಥೀಮ್‌ನ ಜೋಡಿ ಟೆಡ್ಡಿಗಳು ಇದರ ಮುಖ್ಯ ಆಕರ್ಷಣೆ.  ಜತೆಗೆ ಸ್ಟೇಷನರಿ ವಸ್ತುಗಳಾದ ಪುಸ್ತಕಗಳು, ಉಡುಗೊರೆಯನ್ನು ಪ್ಯಾಕ್ ಮಾಡುವ ರ್‍ಯಾಪರ್ ಶೀಟ್‌ಗಳು, ಗಿಫ್ಟ್ ಬ್ಯಾಗ್‌ಗಳ ಹೊಸ ಶ್ರೇಣಿಗಳು ಲಭ್ಯವಿವೆ. ₨55  ದರ ಆರಂಭ.  ವ್ಯಾಲೆಂಟೈನ್ ಗಿಫ್ಟ್‍ಗಳು ನಗರದ ಎಲ್ಲಾ ಆರ್ಚೀಸ್ ಮಳಿಗೆಗಳಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.