ADVERTISEMENT

ಸದಾ ಕಾಲಕ್ಕೂ ಒಪ್ಪುವ ಕಪ್ಪು–ಬಿಳುಪು

ರಮೇಶ ಕೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ನಭಾ ನಟೇಶ್‌
ನಭಾ ನಟೇಶ್‌   

ಕಪ್ಪು–ಬಿಳುಪು ಉಡುಪುಗಳು ಇಂದಿಗೂ ಫ್ಯಾಷನ್‌ನ ಭಾಗವಾಗಿವೆ. ಸಾಧಾರಣ ಬಟ್ಟೆಗಳಿಂದ ಗ್ರ್ಯಾಂಡ್‌ ಲುಕ್‌ ಕೊಡುವ ಉಡುಪುಗಳೂ ಕಪ್ಪು–ಬಿಳುಪಿನಲ್ಲಿ ಇವೆ. ಅನಾದಿ ಕಾಲದಿಂದ ಇಂದಿನವರೆಗೂ, ಯುವಕರಿಂದ ವೃದ್ಧರವರೆಗೂ ಇಷ್ಟಪಡುವ ಬಣ್ಣಗಳಿವು. ಇಂಥ ಕಪ್ಪು–ಬಿಳುಪನ್ನು ಥೀಮ್‌ ಆಗಿಸಿಕೊಂಡು ಹೊಸ ಹೊಸ ಉಡುಪು ಸಂಗ್ರಹಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಯುವಕರ ನೆಚ್ಚಿನ ಟ್ರೆಂಡ್‌ ಆಗಿಯೂ ಬ್ಲ್ಯಾಕ್‌ ಅಂಡ್‌ ವೈಟ್‌ ಉಡುಪುಗಳು ಕಂಗೊಳಿಸುತ್ತಿವೆ.

ಕಪ್ಪು ಪ್ಯಾಂಟ್‌ಗೆ ಬಿಳಿ ಮತ್ತು ಕಪ್ಪು ಮಿಶ್ರಣದ ಟೀಶರ್ಟ್‌ಗಳು, ನೀಲಿ ಜೀನ್ಸ್‌ಗೆ ಕಪ್ಪು ಬಣ್ಣದ ಉಡುಪುಗಳು ಮ್ಯಾಚ್‌ ಆಗುತ್ತವೆ. ಸ್ನೇಹಿತರೊಂದಿಗೆ ಸುತ್ತಲು, ಪಾರ್ಟಿಗಳಿಗೆ ಹಾಗೂ ಕಚೇರಿಗಳಿಗೂ ಕಪ್ಪು–ಬಿಳುಪಿನ ವಸ್ತ್ರಗಳು ಒಪ್ಪುತ್ತವೆ. ಕಪ್ಪು ಬಣ್ಣದ ಸಲ್ವಾರ್‌, ಸೀರೆ, ಗೌನ್‌ಗಳು ಯುವತಿಯರಿಗೆ ಇಷ್ಟವಾಗುತ್ತವೆ. 

(ಕಪ್ಪು–ಬಿಳುಪು ಉಡುಪಿನಲ್ಲಿ ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌)

ADVERTISEMENT

ಸಿನಿಮಾ ನಟರು, ಕ್ರೀಡಾಪಟುಗಳಿಗೂ ಕಪ್ಪು–ಬಿಳುಪಿನ ಉಡುಪುಗಳು ಅಚ್ಚುಮೆಚ್ಚು. ಆರ್‌ಸಿಬಿ ಸ್ಫೋಟಕ ಬ್ಯಾಟ್ಸ್‌ಮೆನ್‌ ಕ್ರಿಸ್‌ ಗೇಲ್‌ ಕೂಡ ಕಪ್ಪು–ಬಿಳುಪಿನ ಉಡುಪುಗಳನ್ನು ಇಷ್ಟಪಡುತ್ತಾರೆ. ಈಚೆಗೆ ಆಟಿಟ್ಯೂಡ್‌ ಕಂಪೆನಿಯ ರಾಯಭಾರಿಯೂ ಆದ ಗೇಲ್‌, ಕಪ್ಪುಬಿಳುಪಿನ ಉಡುಪು ಧರಿಸಿದ ಫೋಟೊಗಳನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿರುವುದೇ ಇದಕ್ಕೆ ಸಾಕ್ಷಿ.

ಸ್ಯಾಂಡಲ್‌ವುಡ್‌ ಬೆಡಗಿ ನಭಾ ನಟೇಶ್‌ ಕೂಡ ಕಪ್ಪು–ಬಿಳುಪಿನ ಉಡುಪುಗಳಿಗೆ ಮಾರುಹೋಗಿದ್ದಾರೆ.

‘ನನಗೆ ಕಪ್ಪು–ಬಿಳುಪಿನ ವಸ್ತ್ರಗಳು ತುಂಬಾ ಇಷ್ಟ. ಶಾಪಿಂಗ್‌ ಹೋದ್ರೆ ರಾಶಿರಾಶಿ ಬಟ್ಟೆಗಳನ್ನು ತೆಗೆದುಕೊಳ್ಳುತ್ತೇನೆ. ಸ್ನೇಹಿತರೊಂದಿಗೆ ಹೊರಗೆ ಹೋಗಲು, ಪಾರ್ಟಿಗಳಿಗೂ ಮ್ಯಾಚ್‌ ಆಗುತ್ತವೆ. ಕಪ್ಪು–ಬಿಳಿಯ ಚೌಕಾಕಾರದ ಶರ್ಟ್‌ಗಳು, ಸಲ್ವಾರ್‌, ಅನಾರ್ಕಲಿ ಸೂಟ್‌ಗಳು, ಆಫ್‌ ಶೋಲ್ಡರ್‌ ಡ್ರೆಸ್‌ಗಳು ನನ್ನಲ್ಲಿವೆ’ ಎನ್ನುತ್ತಾರೆ ನಟಿ ನಭಾ.

ಕಪ್ಪು–ಬಿಳುಪಿನ ಸಂಗ್ರಹ
‘ಎಂದಿಗೂ ಬೋರ್‌ ಆಗದ ಬಣ್ಣಗಳೆಂದರೆ ಕಪ್ಪು–ಬಿಳುಪು. ಹಾಗಾಗಿ ನಮ್ಮ ಬ್ರ್ಯಾಂಡ್‌ನ ನೂತನ ಸಂಗ್ರಹವನ್ನೂ ಇದೇ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದೇವೆ. ಎಲ್ಲಾ ಬಣ್ಣದವರಿಗೂ ಮ್ಯಾಚ್‌ ಆಗುವಂತಹ ಉಡುಪುಗಳಿವು. ಈ ಸಂಗ್ರಹ ಮಾರುಕಟ್ಟೆಯಲ್ಲಿ ಟ್ರೆಂಡ್‌ ಆಗಿದೆ. ಬನಿಯನ್‌ ವಿನ್ಯಾಸದ ‘ಟ್ಯಾಂಕ್‌ ಟೀಸ್‌’, ಶಾಟ್ಸ್‌, ಯುರೋಪ್‌ನಲ್ಲಿ ಹೆಚ್ಚು ಇಷ್ಟಪಡುತ್ತಿರುವ ಲಾಂಗ್‌ ಹುಡಿಗಳು (ಹುಡಿ ಅಂದರೆ ಹೆಡೆಯಂತೆ ಕಾಣುವ, ತಲೆಗೆ ಹಾಕಿಕೊಳ್ಳುವ ಭಾಗ), ಟೋಪಿ, ಟ್ರ್ಯಾಕ್‌ ಪ್ಯಾಂಟ್‌ ‘ಜಾಗರ್ಸ್‌’, ‘ಬೀನಿ’ ಎಲ್ಲವೂ ಕಪ್ಪು–ಬಿಳಿಯ ಉಡುಪುಗಳಾಗಿವೆ’ ಎನ್ನುತ್ತಾರೆ ಆಟಿಟ್ಯೂಡ್‌ ಪುರುಷರ ಫ್ಯಾಷನ್‌ ಕಂಪೆನಿಯ ಸಂಸ್ಥಾಪಕ ಮನ್ಸೂರ್ ಅಹಮದ್‌.

ಬೈಕ್‌ ಸವಾರರು ಮೂಗಿಗೆ ಹಾಕಿಕೊಳ್ಳುತ್ತಿದ್ದ ಮಾಸ್ಕ್‌ಗಳು ಈಗ ಫ್ಯಾಷನ್‌ನ ಭಾಗವಾಗಿವೆ. ಯುವಕರು  ಕಪ್ಪುಬಣ್ಣದ ಮಾಸ್ಕ್‌ಗಳನ್ನು ಖರೀದಿಸುತ್ತಿದ್ದು, ಹೊಸ ಟ್ರೆಂಡ್‌ ಸೃಷ್ಟಿಯಾಗಿದೆ.

**

ಕಪ್ಪು–ಬಿಳುಪಿನ ನೂತನ ಸಂಗ್ರಹಗಳನ್ನು ವಿದೇಶಗಳ ಯುವಕರು ಹೆಚ್ಚು ಇಷ್ಟಪಡುತ್ತಿದ್ದಾರೆ. ಜೀನ್ಸ್‌ನೊಂದಿಗೆ ಕಂಫರ್ಟ್‌ ಎನಿಸುವಂಥ ಉಡುಪುಗಳನ್ನು ಬಿಡುಗಡೆ ಮಾಡಿದ್ದೇವೆ.


–ಮನ್ಸೂರ್,
ಆಟಿಟ್ಯೂಡ್‌ ಬ್ರ್ಯಾಂಡ್‌ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.