ADVERTISEMENT

ಸಿನಿಮಾಹಬ್ಬಕ್ಕೆ ಚಿತ್ತಾಪಹಾರಿ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಚಿತ್ರಗಳು ಎಂ.ಎಸ್‌. ಮಂಜುನಾಥ್‌
ಚಿತ್ರಗಳು ಎಂ.ಎಸ್‌. ಮಂಜುನಾಥ್‌   

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮ (ಫೆ. 22) ಒಂದೂವರೆ ತಾಸು ವಿಳಂಬವಾಗಿ ಆರಂಭವಾಯಿತು. ವಿಳಂಬದ ಬೇಸರವನ್ನು ಶಮನಗೊಳಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು. ಪ್ರಾರ್ಥನೆಯ ರೂಪದಲ್ಲಿ ನಡೆದ ಗಣೇಶಸ್ತುತಿಯಲ್ಲಿ ವೇದಿಕೆಯ ತುಂಬ ವೇಷಧಾರಿ ಗಣಪಗಳು!

ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಹಣೆಪಟ್ಟಿ ಬರೆಸಿಕೊಂಡ ವಿಧಾನಸೌಧದ ಪರಿಸರ ಒಮ್ಮೆಗೇ ದೈವಿಕ ಕಳೆಯನ್ನು ಆವಾಹಿಸಿಕೊಂಡಂತಿತ್ತು. ನಂತರದ್ದು ಲೇಸರ್‍ ಅಲೆಗಳ ನೆಳಲು ಬೆಳಕಿನ ಬಳುಕಾಟ. ಕೃತಕ ನೆಳಲು ಬೆಳಕನ್ನು ನಾಚಿಸುವಂತೆ ನಡೆದದ್ದು ನೃತ್ಯದ ಭರ್ಜರಿ ಪ್ರದರ್ಶನ. ಹಲವು ನೃತ್ಯಪ್ರಕಾರಗಳನ್ನು ಕಸಿ ಮಾಡಿ ಮಾಧುರಿ ಹಾಗೂ ಮಯೂರಿ ಉಪಾಧ್ಯ ಸಂಯೋಜಿಸಿದ್ದ ನೃತ್ಯಪ್ರದರ್ಶನ ಇರುಳಿನಲ್ಲಿ ಸ್ವಪ್ನಲೋಕವನ್ನು ಸೃಜಿಸುವಷ್ಟು ಪರಿಣಾಮಕಾರಿ ಯಾಗಿತ್ತು. ಈ ಕಾರ್ಯಕ್ರಮಗಳು ಸಿನಿಮೋತ್ಸವಕ್ಕೆ ಅರ್ಥಪೂರ್ಣ ಮುನ್ನುಡಿ ಬರೆಯುವಂತಿದ್ದವು.

**

ADVERTISEMENT

**

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.