ADVERTISEMENT

8 ಪ್ಯಾಕ್‌ ಕನಸಿನ ವಜ್ರಕಾಯಿ

ಸುರೇಖಾ ಹೆಗಡೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
8 ಪ್ಯಾಕ್‌ ಕನಸಿನ ವಜ್ರಕಾಯಿ
8 ಪ್ಯಾಕ್‌ ಕನಸಿನ ವಜ್ರಕಾಯಿ   

‘ನಾನು ಪಕ್ಕಾ ಲೋಕಲ್‌ ಹುಡುಗ’ ಎಂದು ಹೇಳಿಕೊಳ್ಳುವ ರಜತ್‌ ಬೆಂಗಳೂರಿನ ಶಂಕರಮಠದವರು. ಇನ್‌ಫಾರ್ಮೇಶನ್‌ ಸೈನ್ಸ್‌ ವಿಷಯದಲ್ಲಿ ಡಿಪ್ಲೊಮಾ ಅಭ್ಯಾಸ ಮಾಡಿರುವ ರಜತ್‌ ಹಣಕಾಸಿಗೆ ಸಂಬಂಧಿಸಿದ ಬ್ಯುಸಿನೆಸ್‌ ಅನ್ನೂ ನೋಡಿಕೊಳ್ಳುತ್ತಾರೆ. ಶಾಲಾ ಕಾಲೇಜು ದಿನಗಳಿಂದಲೂ ತಮ್ಮ ಫಿಟ್‌ನೆಸ್‌ ಬಗೆಗೆ ಹೆಚ್ಚು ಆಸಕ್ತಿ ವಹಿಸಿದ್ದ ಅವರ ದಾರಿಗೇ ಅವಕಾಶಗಳನೇಕ ಒದಗಿಬಂದವು.

ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು ರಿಯಾಲಿಟಿ ಶೋಗೆ ಪತ್ನಿ ಅಕ್ಷಿತಾ ಅವರನ್ನು ಕಳಿಸಿದ್ದೇ ರಜತ್‌ ಬದುಕಿನಲ್ಲಿಯೂ ಹೊಸ ತಿರುವು ಸಿಕ್ಕಿತು. ಅಲ್ಲಿಂದ ಒಂದೊದೇ ಹೆಜ್ಜೆ ಮೇಲೇರುತ್ತಾ ಸಾಗಿದರು. ಅವರ ಹಾಗೂ ಅವರ ಪತ್ನಿಯ ಜೋಡಿ ಜನಪ್ರಿಯತೆ ಗಳಿಸುತ್ತಿದ್ದಂತೆ ರಾಜ್‌ ಮ್ಯೂಸಿಕ್‌ನಲ್ಲಿ ‘ಕಿರಿಕ್‌ ಜೋಡಿ’ ಕಾರ್ಯಕ್ರಮ ನಿರೂಪಣೆ ಮಾಡಿದರು. ನಂತರ ಸೂಪರ್‌ ಜೋಡಿ ಸೀಸನ್‌ ಒಂದರಲ್ಲಿಯೂ ಎಂಟ್ರಿ ಪಡೆದರು. ಡಾನ್ಸ್‌ ಡಾನ್ಸ್‌ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸುವಂತೆ ಅವರಿಗೆ ಆಹ್ವಾನ ಸಿಕ್ಕಿತು. ರಿಯಾಲಿಟಿ ಶೋಗಳ ಅತ್ಯುತ್ತಮ ಸ್ಪರ್ಧಿ ಎಂಬ ಹೆಗ್ಗಳಿಕೆಯೂ ಅವರಿಗೆ ಸಿಕ್ಕಿತ್ತು.

ರಿಯಾಲಿಟಿ ಶೋಗಳ ಮೂಲಕ ಜನತೆಗೆ ಹತ್ತಿರವಾಗುತ್ತಿದ್ದ ರಜತ್‌ ಅವರಿಗೆ ಸುವರ್ಣ ವಾಹಿನಿಯಲ್ಲಿ ‘ಗೀತಾಂಜಲಿ’ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಉದಯ ವಾಹಿನಿಯಲ್ಲಿ ಬರುತ್ತಿದ್ದ ‘ಸೂಪರ್‌ ಕಬಡ್ಡಿ’ ಮಹಿಳಾ ಸ್ಪರ್ಧೆಯಲ್ಲಿ ಮೆಂಟರ್‌ ಆಗಿದ್ದರು. ಹೀಗೆ ತಮ್ಮ ದಾರಿಗೆ ಬಂದ ಅವಕಾಶಗಳನ್ನೆಲ್ಲಾ ಬಾಚಿಕೊಳ್ಳುತ್ತಾ ಸಾಗಿದ ರಜತ್‌ ‘ಮೂಡ್‌ ಔಟ್‌’ ಎನ್ನುವ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ADVERTISEMENT

ಖಳನಾಯಕನ ಪಾತ್ರದ ಬಗೆಗೇ ಹೆಚ್ಚು ಒಲವಿರುವ ಅವರಿಗೆ ಇತ್ತೀಚೆಗೆ ತಮಿಳು ಹಾಗೂ ತೆಲುಗು ಸಿನಿಲೋಕದಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ‘ಅಚಾನಕ್ಕಾಗಿ ಈ ಕ್ಷೇತ್ರಕ್ಕೆ ಬಂದೆ. ಆದರೂ ಉತ್ತಮ ಅವಕಾಶಗಳು ಸಿಕ್ಕವು. ಸಿನಿಮಾದಲ್ಲಿ ಅಭಿನಯ ಕೌಶಲ ಬೇಡುವ ಖಳಪಾತ್ರಗಳಲ್ಲಿ ಮಿಂಚಬೇಕು ಎಂಬುದು ದೊಡ್ಡ ಆಸೆ. ರವಿಶಂಕರ್‌ ಪ್ರಕಾಶ್‌ ರಾಜ್‌ ನನ್ನ ಈ ಆಸೆಗೆ ಸ್ಫೂರ್ತಿ. ಸಿನಿಮಾದಲ್ಲಿಯೇ ನೆಲೆಯೂರುವ ಆಸೆ ಇರುವುದರಿಂದ ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ’ ಎನ್ನುತ್ತಾರೆ ರಜತ್‌.

**

‘ಪುಸ್ತಕವನ್ನು ಬಿಸಾಡು; ಪ್ರಕೃತಿಯೇ ನಿನಗೆ ಪರಮ ಗುರುವಾಗಲಿ’ –ಎಂಬ ವಾಕ್ಯವನ್ನು ವರ್ಡ್ಸ್‌ವರ್ಥ್‌ ತನ್ನ ಕೃತಿಯಲ್ಲಿ ಹೇಳಿದ್ದಾರೆ. ಈ ವಾಕ್ಯದ ಆಶಯ ಚೆನ್ನಾಗಿದೆಯಾದರೂ ಮರುಪರಿಶೀಲನೆಗೆ ಒಳಗಾಗಬೇಕಾದ ವಾಕ್ಯವಿದು. ನಮ್ಮ ಆಲೋಚನೆಯ ವಿಷಯ ನಿಸರ್ಗ ಕೇಂದ್ರಿತವಾಗಬೇಕು ಎಂಬುದೇನೋ ಸರಿ. ಆದರೆ ನಿಸರ್ಗ ಕುರಿತು ಆಲೋಚನೆ ಮಾಡುವ ಬಗೆಗೆ ಪುಸ್ತಕಗಳು ತಿಳಿಸದೇ ಹೋದರೆ– ಅದು ಕೇವಲ ಅನುತ್ಪಾದಕ ಹಗಲುಗನಸಿನ ಆಕರ ಸಾಮಗ್ರಿ ಆಗಿಬಿಡುವ ಅಪಾಯವಿದೆ. ನಿಸರ್ಗದ ಅಧ್ಯಯನಕ್ಕೆ ಬೇಕಾದ– ಪ್ರಶ್ನೆ ರೂಪಿಸುವ ಕೇಳಲು ತಾರ್ಕಿಕ ವಿಭಾಗ, ಪರೀಕ್ಷೆ, ಪ್ರಯೋಗ ಎಲ್ಲವೂ ಪುಸ್ತಕದ ಅಧ್ಯಯನದಿಂದಲೇ ಪರಿಪಕ್ವವಾಗಬೇಕಾದವು. ವಿಷಯವನ್ನು ಆಲೋಚನಾ ಕೇಂದ್ರವನ್ನು ನಿಸರ್ಗ ಒದಗಿಸಿದರೂ ಆಲೋಚನಾ ವಿಧಾನವನ್ನು ಪುಸ್ತಕವೇ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.