ADVERTISEMENT

ಅಗ್ನಿಶಾಮಕ ಠಾಣೆಗಳ ಭಾರಿ ಕೊರತೆ

ರಾಜ್ಯಕ್ಕೆ ಬೇಕು ಇನ್ನೂ 195 ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಅಗ್ನಿಶಾಮಕ ಠಾಣೆಗಳ ಭಾರಿ ಕೊರತೆ
ಅಗ್ನಿಶಾಮಕ ಠಾಣೆಗಳ ಭಾರಿ ಕೊರತೆ   
ದೇಶದಲ್ಲಿ ಒಟ್ಟು 8,559 ಅಗ್ನಿಶಾಮಕ ಠಾಣೆಗಳ ಅಗತ್ಯವಿದ್ದು, ಈಗ 2,987 ಠಾಣೆಗಳಷ್ಟೇ ಅಸ್ತಿತ್ವದಲ್ಲಿವೆ. ಹೀಗಾಗಿ ಬೆಂಕಿ ಅವಘಡಗಳಿಂದ ಆಗುತ್ತಿರುವ ಜೀವ ಮತ್ತು ಆಸ್ತಿ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಲು ಆಗುತ್ತಿಲ್ಲ.

ದೇಶದಲ್ಲಿ ಇನ್ನೂ 5,572 ಠಾಣೆಗಳ ಅಗತ್ಯವಿದ್ದು, ಅದರಲ್ಲಿ ನಗರ ಪ್ರದೇಶದಲ್ಲೇ 4,257 ಠಾಣೆಗಳು ಸ್ಥಾಪನೆಯಾಗಬೇಕಿದೆ ಎಂದು ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
 
ಗೃಹ ಸಚಿವಾಲಯ ಮತ್ತು ‘ರಿಸ್ಕ್‌ ಮ್ಯಾನೇಜ್‌ಮೆಂಟ್ ಸಲ್ಯೂಷನ್ ಇಂಕ್‌’ ಜಂಟಿಯಾಗಿ ಅಧ್ಯಯನ ನಡೆಸಿ, ವರದಿಯನ್ನು ಸಿದ್ಧಪಡಿಸಿವೆ. ಆ ವರದಿಯನ್ನು ಲೋಕಸಭೆಯಲ್ಲಿ  ಮಂಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.