ADVERTISEMENT

ಅಜ್ಜನಿಗಾಗಿ ವಿದ್ಯುತ್‌, ಬ್ಯಾಟರಿ ರಹಿತ ಫ್ಯಾನ್‌ ನಿರ್ಮಿಸಿದ ಯುವಕ

ಏಜೆನ್ಸೀಸ್
Published 28 ಫೆಬ್ರುವರಿ 2017, 13:09 IST
Last Updated 28 ಫೆಬ್ರುವರಿ 2017, 13:09 IST
ಅಜ್ಜನಿಗಾಗಿ ವಿದ್ಯುತ್‌, ಬ್ಯಾಟರಿ ರಹಿತ ಫ್ಯಾನ್‌ ನಿರ್ಮಿಸಿದ ಯುವಕ
ಅಜ್ಜನಿಗಾಗಿ ವಿದ್ಯುತ್‌, ಬ್ಯಾಟರಿ ರಹಿತ ಫ್ಯಾನ್‌ ನಿರ್ಮಿಸಿದ ಯುವಕ   

ಚೆನ್ನೈ: ಬೇಸಿಗೆಯಲ್ಲಿ ಪದೇ ಪದೇ ಕೈಕೊಡುವ ವಿದ್ಯುತ್‌ಗೆ ಪರ್ಯಾಯವಾಗಿ ತಮಿಳುನಾಡಿನ ಯುವಕನೊಬ್ಬ ತನ್ನ ಅಜ್ಜನಿಗಾಗಿ ವಿನೂತನ ಫ್ಯಾನ್ ವಿನ್ಯಾಸಗೊಳಿಸಿದ್ದಾನೆ.

ಈ ಫ್ಯಾನ್‌ ತಿರುಗಲು ವಿದ್ಯುತ್‌ಶಕ್ತಿ ಬೇಕಿಲ್ಲ. ಬ್ಯಾಟರಿಯೂ ಬೇಕಿಲ್ಲ. ನಿತ್ಯ ಕಾಯಕದಲ್ಲಿ ಸಹಾಯವಾಗುವಂತೆ ಚಲನಶಕ್ತಿ ಆಧಾರದ ಮೇಲೆ ಫ್ಯಾನ್‌ ತಯಾರಿಸಲಾಗಿದೆ.

ದಿನೇಶ್‌ ಜಿ.ಎಸ್‌. ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿ ತನ್ನ ಅಜ್ಜನಿಗಾಗಿ ಈ ಫ್ಯಾನ್‌ ನಿರ್ಮಿಸಿದ್ದಾನೆ.



ಕೈಮಗ್ಗ ನೇಯ್ಗೆ (ಪವರ್‍ಲೂಮ್‌) ಮಾಡುವ ದಿನೇಶ್‌ ಅವರ ತಾತ ಪದೇ ಪದೇ ಕಡಿತಗೊಳ್ಳುವ ವಿದ್ಯುತ್‌ನಿಂದ ಬೇಸತ್ತಿದ್ದಾರೆ. ವಿದ್ಯುತ್‌ ಕಡಿತಗೊಂಡ ಸಮಯದಲ್ಲಿ ಕೆಲಸ ಮಾಡದ ಪರಿಸ್ಥಿತಿ ಉಂಟಾಗುತ್ತದೆ ಎಂದು ಮೊಮ್ಮಗನ ಬಳಿ ಹೇಳಿಕೊಂಡಿದ್ದಾರೆ.

ಕೂಡಲೇ ಉಪಾಯ ಮಾಡಿದ ದಿನೇಶ್‌, ಫ್ಯಾನ್‌ ನಿರ್ಮಿಸಲು ಬೇಕಿರುವ ಸಲಕರಣೆಗಳನ್ನು ತಂದು ಫ್ಯಾನ್‌ ಸಿದ್ಧಪಡಿಸಿದ್ದಾರೆ. ಚಲನಶಕ್ತಿಯ ಉಪಯೋಗ ಅರಿತಿರುವ ಇವರು ಕೈಮಗ್ಗದಲ್ಲಿ ಉತ್ಪತ್ತಿಯಾಗುವ ಬಾಹ್ಯಶಕ್ತಿಯ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ.

ನೇಯ್ಗೆ ಸಮಯದಲ್ಲಿ ಚಲಿಸುವ ಯಂತ್ರಕ್ಕೆ ಫ್ಯಾನ್‌ ಕೂಡ ಸಂಪರ್ಕಕ್ಕೆ ಬರುವಂತೆ ವಿನ್ಯಾಸ ರೂಪಿಸಿದ್ದಾರೆ. ನೇಯ್ಗೆಯಲ್ಲಿ ವಿನಿಯೋಗಿಸುವ ಸಮಯದಲ್ಲಿ ಫ್ಯಾನ್‌ ರೆಕ್ಕೆಗಳು ಕೂಡ ತಿರುಗುತ್ತವೆ. ಇದರಿಂದ ಯಾವುದೇ ವಿದ್ಯುತ್‌ ಅಥವಾ ಬ್ಯಾಟರಿ ಸಹಾಯವಿಲ್ಲದೆ ಫ್ಯಾನ್ ತಿರುಗುತ್ತದೆ.

ಈ ಆವಿಷ್ಕಾರದ ಮೂಲಕ ಅಜ್ಜನ ದೈನಂದಿನ ವೃತ್ತಿ ಬದುಕನ್ನು ಸುಗಮಗೊಳಿಸಿದ್ದಾರೆ. ದಿನೇಶ್‌ ಅವರ ಹೊಸ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT