ADVERTISEMENT

ಅತ್ಯಾಚಾರ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಪಣಜಿ (ಪಿಟಿಐ):‌ದೆಹಲಿ ಮೂಲದ ಇಬ್ಬರು ಮಹಿಳೆಯರ ಮೇಲೆ  ಐವರು ಪುರುಷರ ತಂಡ ಹಲ್ಲೆ ನಡೆಸಿ ಅತ್ಯಾಚಾರವೆಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಗೋವಾದ ಅಂಜುನಾ ಬೀಚ್‌ ಗ್ರಾಮದ ಫ್ಲ್ಯಾಟ್‌ಯೊಂದರಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ತಾವು ಮಾದಕದ್ರವ್ಯ ನಿಗ್ರಹ ಘಟಕದ ಪೊಲೀಸ್‌ ಅಧಿಕಾರಿಗಳು ಎಂದು ಮಹಿಳೆಯರ ಮುಂದೆ ಬಿಂಬಿಸಿಕೊಂಡಿದ್ದರು.

ರಜೆ ಕಳೆಯಲು  22 ಮತ್ತು 30 ವರ್ಷದ ಮಹಿಳೆಯರು ಗೋವಾಕ್ಕೆ ಬಂದಿದ್ದು ಮಂಗಳವಾರ ರಾತ್ರಿ ಟ್ಯಾಕ್ಸಿಯಲ್ಲಿ ಅಂಜುನಾ ಬೀಚ್‌ಗೆ ತೆರಳುತ್ತಿದ್ದರು.  ಮಾರ್ಗ ಮಧ್ಯೆ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳೆಂದು ಹೇಳಿಕೊಂಡ ಐವರು ಟ್ಯಾಕ್ಸಿಯನ್ನು ತಡೆದು ಮಹಿಳೆಯರ ಬ್ಯಾಗುಗಳನ್ನು ಶೋಧಿಸಿದ್ದಾರೆ. ಬಳಿಕ ಅವರನ್ನು ಫ್ಲ್ಯಾಟ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಟ್ಯಾಕ್ಸಿ ಚಾಲಕ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳನ್ನು ಬುಧವಾರ ಫ್ಲ್ಯಾಟ್‌ನಲ್ಲೇ ಇಬ್ಬರು ಮಹಿಳೆಯರ ಸಮ್ಮುಖದಲ್ಲಿ  ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.