ADVERTISEMENT

ಅರೆ ನಗ್ನ ಚಿತ್ರಗಳಿರುವ ಪೂನಂ ಪಾಂಡೆ ಆ್ಯಪ್‌ ನಿಷೇಧಮಾಡಿದ ಗೂಗಲ್‌

ಏಜೆನ್ಸೀಸ್
Published 19 ಏಪ್ರಿಲ್ 2017, 9:05 IST
Last Updated 19 ಏಪ್ರಿಲ್ 2017, 9:05 IST
ಅರೆ ನಗ್ನ ಚಿತ್ರಗಳಿರುವ ಪೂನಂ ಪಾಂಡೆ ಆ್ಯಪ್‌ ನಿಷೇಧಮಾಡಿದ ಗೂಗಲ್‌
ಅರೆ ನಗ್ನ ಚಿತ್ರಗಳಿರುವ ಪೂನಂ ಪಾಂಡೆ ಆ್ಯಪ್‌ ನಿಷೇಧಮಾಡಿದ ಗೂಗಲ್‌   

ಮುಂಬೈ: ವಿವಾದಾತ್ಮಕ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆ ಅವರ ದೇಹಸಿರಿಯ ಚಿತ್ರಗಳನ್ನು ಕಣ್ತುಂಬಿ ಕೊಳ್ಳಬೇಕೆಂದಿದ್ದ ಅವರ ಅಭಿಮಾನಿಗಳಿಗೆ ಗೂಗಲ್ ಕಂಪೆನಿಯವರು ನಿರಾಸೆ ಮಾಡಿದ್ದಾರೆ.

ಇತ್ತೀಚೆಗೆ  ಪೂನಂ ಪಾಂಡೆ  ಅವರು ತಮ್ಮ ಅರೆ ನಗ್ನ ಚಿತ್ರಗಳಿರುವ ಆ್ಯಂಡ್ರಾಯಿಡ್ ಆ್ಯಪ್‌ ಅನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಅಶ್ಲೀಲ ಚಿತ್ರಗಳಿವೆ ಎಂದು ಹೇಳಿ ಗೂಗಲ್‌ ಕಂಪೆನಿಯವರು ಈ ಆ್ಯಪ್‌ ಅನ್ನು ನಿಷೇಧಿಸಿದ್ದಾರೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ ಕಾಣುತ್ತಿಲ್ಲ ಎಂದು ಪೂನಂ ಪಾಂಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

ಜನಾಂಗೀಯ ವಾದ’ದ ಹೊಸ ಟ್ವಿಸ್ಟ್‌

‘ನಾನು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ಘಂಟಾಘೋಷವಾಗಿ ಹೇಳಿಕೊಂಡೇ ಆಂಡ್ರಾಯ್ಡ್‌ ಆ್ಯಪ್ ಬಿಡುಗಡೆ ಮಾಡಿದ್ದ ಪೂನಂ ಪಾಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಗೂಗಲ್‌ ‘ಆಶ್ಲೀಲ’ ಎಂಬ ಕಾರಣವೊಡ್ಡಿ ತನ್ನ ಪ್ಲೇಸ್ಟೋರ್‌ನಿಂದ Poonam Pandey ಆ್ಯಪ್‌ ತೆಗೆದುಹಾಕಿದೆ. ಪೂನಂ ಈ ಪ್ರಕರಣಕ್ಕೆ ‘ಜನಾಂಗೀಯ ವಾದ’ದ ಹೊಸ ಟ್ವಿಸ್ಟ್‌ ನೀಡಿದ್ದಾರೆ.

‘ಪ್ಲೇಬಾಯ್‌ ಆ್ಯಪ್‌ ನೋಡಿ ಅಶ್ಲೀಲ ಎಂದು ದೂರದವರು, ಪೂನಂಪಾಡೆ ಆ್ಯಪ್ ನೋಡಿ ದೂರಿದ್ದಾರೆ’ ಎಂದು ಪೂನಂ ತಮ್ಮ ಟ್ವಿಟರ್ ಪುಟದಲ್ಲಿ ಖಾರವಾಗಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು ‘ಗೂಗಲ್ ಜನಾಂಗೀಯವಾದವನ್ನು ಹೇರುತ್ತಿದೆ’ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಏ.17ರಂದು ಪೂನಂ ಆ್ಯಪ್ ಬಿಡುಗಡೆ ಮಾಡಿದ್ದು. ಪ್ಲೇಸ್ಟೋರ್‌ನಲ್ಲಿ ಆ್ಯಪ್ ಲಾಂಚ್ ಆದ ಮೊದಲ 15 ನಿಮಿಷದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ 9:37ಕ್ಕೆ ಗೂಗಲ್ ತನ್ನ ಆ್ಯಪ್ ತೆಗೆದುಹಾಕಿದೆ ಎಂದು ಪೂನಂ ಟ್ವೀಟ್ ಮಾಡಿದ್ದರು.

******

ಪ್ಲೇಸ್ಟೋರ್‌ನಲ್ಲಿ ಸೆಕ್ಸ್‌ ಸ್ಟೋರಿ, ನಗ್ನ ಚಿತ್ರಗಳು ಇರುವ ಎಷ್ಟೊಂದು ಆ್ಯಪ್‌ಗಳಿವೆ. ಈ ಗೂಗಲ್‌ನವರ ಕಣ್ಣಿಗೆ ಅದು ಬೀಳಲ್ವಾ? ಇಷ್ಟಕ್ಕೂ ಆ್ಯಪ್‌ನಲ್ಲಿ ನನ್ನ ನಗ್ನ ಚಿತ್ರ ಇರಲಿಲ್ಲ.
– ಪೂನಂ ಪಾಂಡೆ, ನಟಿ

ಪೂನಂ ಪಾಂಡೆ ವೆಬ್‌ಸೈಟ್‌: www.poonampandey.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.