ADVERTISEMENT

ಅವಧಿಪೂರ್ವ ಚುನಾವಣೆ ಇಲ್ಲ: ವೆಂಕಯ್ಯ ನಾಯ್ಡು ಸ್ಪಷ್ಟನೆ

ಪಿಟಿಐ
Published 30 ಏಪ್ರಿಲ್ 2017, 10:56 IST
Last Updated 30 ಏಪ್ರಿಲ್ 2017, 10:56 IST
ಅವಧಿಪೂರ್ವ ಚುನಾವಣೆ ಇಲ್ಲ: ವೆಂಕಯ್ಯ ನಾಯ್ಡು ಸ್ಪಷ್ಟನೆ
ಅವಧಿಪೂರ್ವ ಚುನಾವಣೆ ಇಲ್ಲ: ವೆಂಕಯ್ಯ ನಾಯ್ಡು ಸ್ಪಷ್ಟನೆ   

ಹೈದರಾಬಾದ್: ಎನ್‌ಡಿಎ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿದ್ದು, ಅವಧಿಪೂರ್ವ ಚುನಾವಣೆ ಕುರಿತು ಹರಡಿರುವ ಸುದ್ದಿ ಆಧಾರರಹಿತವಾದದ್ದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಭಾನುವಾರ ಹೇಳಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲಿದೆ ಎಂಬ ವರದಿಗಳು ಆಧಾರರಹಿತವಾದವು. ಎಲ್ಲಿಂದ ಈ ವದಂತಿ ಹಬ್ಬಿತು ಎಂಬುದು ತಿಳಿಯದು. 2019ರ ಚುನಾವಣೆಗೆ ಸಿದ್ಧರಾಗುವ ನಿಟ್ಟಿನಲ್ಲಿ ಕಠಿಣ ಶ್ರಮವಹಿಸಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳುತ್ತಿದ್ದಾರೆ. ಅದುವೇ ನಮ್ಮ ಗುರಿ ಆಗಿದೆ’ ಎಂದರು.

‘ಐದು ವರ್ಷಗಳ ಆಡಳಿತ ನಡೆಸಲು ನಮಗೆ ಜನಾದೇಶ ದೊರೆತಿದೆ. ಅದನ್ನು ನಾವು ಪೂರ್ಣಗೊಳಿಸಲಿದ್ದೇವೆ. ಅನಂತರ 2019ರಲ್ಲಿ ಚುನಾವಣೆ ಎದುರಿಸಲಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.