ADVERTISEMENT

ಅಸ್ಸಾಂ: 101 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ನಿರ್ಮಾಣ

ಸುಮಾರು 5000 ಬೊಂಬುಗಳ ಬಳಕೆ

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 11:41 IST
Last Updated 23 ಸೆಪ್ಟೆಂಬರ್ 2017, 11:41 IST
ಅಸ್ಸಾಂ: 101 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ನಿರ್ಮಾಣ
ಅಸ್ಸಾಂ: 101 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ನಿರ್ಮಾಣ   

ಗುವಾಹಟಿ : ಇಲ್ಲಿನ ಬಿಷ್ಣುಪುರ ಸರ್ಬೋಜನಿನ್ ದುರ್ಗಾ ಪೂಜಾ ಸಮಿತಿಯು ಸಂಪೂರ್ಣವಾಗಿ ಬಿದಿರನ್ನು ಬಳಸಿ 101 ಅಡಿ ಎತ್ತರದ ದುರ್ಗಾದೇವಿ ವಿಗ್ರಹವನ್ನು ನಿರ್ಮಿಸಿದೆ.

ಇದು ಜಗತ್ತಿನ ಅತಿ ಎತ್ತರದ ಬಿದಿರಿನ ದುರ್ಗಾದೇವಿ ವಿಗ್ರಹ ಎಂಬ ಖ್ಯಾತಿಗೆ ಒಳಗಾಗಿದ್ದು, ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಕಲಾ ನಿರ್ದೇಶಕ ನೂರುದ್ದೀನ್ ಅಹ್ಮದ್ ಮತ್ತು  40 ಶಿಲ್ಪಿಗಳು ಸೇರಿ ವಿಗ್ರಹಕ್ಕೆ ರೂಪು ಕೊಟ್ಟಿದ್ದು, ಇದಕ್ಕೆ ಸುಮಾರು 5000 ಬೊಂಬುಗಳನ್ನು ಬಳಸಲಾಗಿದೆ.

ನೂರುದ್ದೀನ್ ಅಹ್ಮದ್ ಅವರು 1975ರಿಂದ ಶಿಲ್ಪ ನಿರ್ಮಾಣದಲ್ಲಿ ತೊಡಗಿದ್ದು, ಈ ವಿಗ್ರಹ ನಿರ್ಮಾಣ ಕಾರ್ಯವನ್ನು ಕಳೆದ ಆಗಸ್ಟ್‌ 1ರಿಂದ ಆರಂಭಿಸಿದ್ದರು.

ADVERTISEMENT

ಮುಸ್ಲಿಂನಾಗಿದ್ದರೂ ಕೂಡ ಹಿಂದೂ ದೇವತೆಯಾದ ದುರ್ಗಾ ದೇವಿ ನಿರ್ಮಾಣಕ್ಕೆ ಯಾಕೆ ಮುಂದಾಗಿದ್ದು ಎಂದು ಪ್ರಶ್ನಿಸಿದಾಗ ಅಹ್ಮದ್ ಅವರು,‘ ಕಲೆಗೆ ಯಾವುದೇ ಜಾತಿ ಧರ್ಮ ಹಂಗಿಲ್ಲ. ಅವರಿಗೆ ಇರುವುದು ಒಂದೇ ಧರ್ಮ. ಮಾನವೀಯತೆಯನ್ನು ಸಾರುವುದು ಶಿಲ್ಪಿಗಳ ಕಾಯಕ’ ಎಂದು ಹೇಳಿದ್ದಾರೆ.

ಇದರ ಮೇಲ್ವಿಚಾರಕರಾದ  ದೀಪ್ ಅಹ್ಮದ್ ಅವರು, ‘ಈ ದೇವಿ ವಿಗ್ರಹದ ರೂಪರಚನೆಗೆ ಯಾವುದೇ ಲೋಹ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ. ಇದು ಸಂಪೂರ್ಣ ನೈಸರ್ಗಿಕವಾದುದು.  ಪ್ರಾರಂಭದಲ್ಲಿ 110 ಅಡಿ ಎತ್ತರದ ವಿಗ್ರಹ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಇದೇ 17ರಂದು ಪ್ರವಾಹ ಎದುರಾದ ಕಾರಣ ನಿರ್ಮಾಣ ಕಾರ್ಯಕ್ಕೆ ತೊಂದರೆಯಾಗಿತ್ತು. ತದನಂತರ ಕೇವಲ ಒಂದೇ ವಾರದಲ್ಲಿ ವಿಗ್ರಹವನ್ನು ಪುನರ್‌ರೂಪಿಸುವುದು ಸವಾಲಾಗಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.