ADVERTISEMENT

ಆಂಧ್ರ ಸಚಿವೆ ಮನೆಯಲ್ಲಿ ಹಣದ ಚೀಲ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಹೈದರಾಬಾದ್‌ (ಪಿಟಿಐ): ಹತ್ತು ಲಕ್ಷ ರೂಪಾಯಿ ಮತ್ತು ಶೈಕ್ಷಣಿಕ ದಾಖಲೆಗಳನ್ನು ಹೊಂದಿದ್ದ ಚೀಲವೊಂದು ಆಂಧ್ರ ಪ್ರದೇಶದ ಮಕ್ಕಳ ಕಲ್ಯಾಣ ಸಚಿವೆ ಪಿ. ಸುಜಾತಾ ಅವರ ಮನೆಯಲ್ಲಿ ಪತ್ತೆಯಾಗಿದೆ.

ಮಂಗಳವಾರ ಸಂಜೆ ಈ ಚೀಲ ಪತ್ತೆಯಾಗಿದೆ. ಇದು ತನ್ನದೆಂದು ಬುಧವಾರ ಮಹಿಳೆಯೊಬ್ಬಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಉದ್ದೇಶಪೂರ್ವಕವಾಗಿಯೇ ಯಾರೋ ನಮ್ಮ ಮನೆಯಲ್ಲಿ ಇದನ್ನು ಇಟ್ಟಿರಬಹುದು ಎಂಬ ಸಂಶಯವನ್ನು ಸಚಿವೆ ವ್ಯಕ್ತಪಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ’ ಎಂದು ರಸಾಪುರ ಎಸ್‌ಪಿ ಸೌಮ್ಯಲತಾ ಹೇಳಿದ್ದಾರೆ.

ಸಚಿವೆಯನ್ನು ಭೇಟಿಯಾಗಲು ಮಂಗಳವಾರ ಸಂಜೆ ಅವರ ಮನೆಗೆ ಹೋಗಿದ್ದೆ. ಆದರೆ ಭೇಟಿ ಸಾಧ್ಯವಾಗಲಿಲ್ಲ. ಚೀಲವನ್ನು ಅಲ್ಲೇ ಮರೆತು ಬಂದೆ ಎಂದು 51 ವರ್ಷದ ಮಹಿಳೆ ಹೇಳಿದ್ದಾರೆ.

ಚೀಲದಲ್ಲಿದ್ದ ಶೈಕ್ಷಣಿಕ ದಾಖಲೆಗಳು ತಮ್ಮ ಮಗಳಿಗೆ ಸೇರಿದ್ದು ಎಂದೂ ಅವರು  ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.