ADVERTISEMENT

ಆಧಾರ್‌ಗೆ ಮೊಬೈಲ್ ಸಿಮ್‌ ಲಿಂಕ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ನವದೆಹಲಿ (ಐಎಎನ್ಎಸ್‌): ವಿಶಿಷ್ಟ ಗುರುತಿನ ಚೀಟಿ ‘ಆಧಾರ್‌’  ವ್ಯವಸ್ಥೆಯನ್ನು ಮತ್ತಷ್ಟು ಸರಳ ಹಾಗೂ ಬಳಕೆ­ದಾರರ ಸ್ನೇಹಿಯನ್ನಾಗಿ ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ ‘ಆಧಾರ್‌’ ಯೋಜನೆ ಜತೆ ಮೊಬೈಲ್‌ ‘ಸಿಮ್‌’ ತಳಕು ಹಾಕುವ (ಲಿಂಕ್ ನೀಡುವ) ಹೊಸ ಆಲೋಚನೆ  ಮಾಡಿದೆ.

‘ಮೊಬೈಲ್‌ ಸಿಮ್‌ ಹಾಗೂ ಆಧಾರ್‌  ಕಾರ್ಡ್‌ ಜತೆ ಸಂಪರ್ಕ ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ  ನಿರ್ದೇಶನ ನೀಡಿದ್ದು, ಅಧಿಕಾರಿಗಳು­ ಈ ಯೋಜನೆ­ ಕಾರ್ಯ­ಗತ­ಗೊಳಿಸುವಲ್ಲಿ ಮಗ್ನ­ರಾ­ಗಿದ್ದಾರೆ’  ಎಂದು  ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್‌.ಎಸ್‌. ಶರ್ಮಾ ತಿಳಿಸಿದರು.

ಮೊಬೈಲ್‌  ಗ್ರಾಹಕರ  ಮಾಹಿತಿಗಳನ್ನು ಆಧಾರ್‌ಗೆ ಬಳಸಿ­­ಕೊಳ್ಳುವ ಈ ಯೋಜನೆ ಯಶಸ್ವಿಯಾದರೆ ಕ್ರಾಂತಿ­ಯಾಗ­ಲಿದೆ ಎಂದು ಅವರು ತಿಳಿಸಿದರು. ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಅಡಿ   ಕೈಗೆತ್ತಿ­ಕೊಳ್ಳಲಾಗಿರುವ ಯೋಜನೆ ಕಾರ್ಯಗತ­ಗೊಳಿಸುವ ಕುರಿತು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ,  ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದು ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.