ADVERTISEMENT

ಆಪಾದನೆಗಳಲ್ಲಿ ಹುರುಳಿಲ್ಲ: ವಾದ್ರಾ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 9:24 IST
Last Updated 30 ಜೂನ್ 2016, 9:24 IST
ಆಪಾದನೆಗಳಲ್ಲಿ ಹುರುಳಿಲ್ಲ: ವಾದ್ರಾ
ಆಪಾದನೆಗಳಲ್ಲಿ ಹುರುಳಿಲ್ಲ: ವಾದ್ರಾ   

ನವದೆಹಲಿ: ‘ಸುಮಾರು ಒಂದು ದಶಕದಿಂದಲೂ ಸರ್ಕಾರಗಳು ನನ್ನ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪಿಗಳನ್ನು ಮಾಡುತ್ತಿವೆ. ಆದರೆ, ಈ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಅವರು ಯಾವುದೇ ಆಧಾರಗಳಿಲ್ಲದೆ ನನ್ನ ವಿರುದ್ಧದ ಆಪಾದನೆಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸಾಬೀತುಪಡಿಸುವಂಥದ್ದು ನಿಜಕ್ಕೂ ಏನೂ ಇಲ್ಲ’ ಎಂದು ವಾದ್ರಾ ಬರೆದಿದ್ದಾರೆ.

‘ಯಾವಾಗಲೂ ನನ್ನನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ನನಗೆ ಗೊತ್ತಿದೆ... ಆದರೆ, ನನಗೆ ಸತ್ಯದ ಜಯದಲ್ಲಿ ನಂಬಿಕೆ ಇದೆ. ನನ್ನ ವಿರುದ್ಧದ ಸುಳ್ಳು ಆರೋಪಗಳಿಗೆ ವಿಚಲಿತನಾಗದೆ ನಾನು ತಲೆ ಎತ್ತಿಕೊಂಡು ನಡೆಯುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.