ADVERTISEMENT

ಆಸ್ಕರ್‌ಗೆ ನಾಮನಿರ್ದೇಶನಗೊಂಡ ‘ನ್ಯೂಟನ್‌’

ವಿದೇಶಿ ವಿಭಾಗ

ಪಿಟಿಐ
Published 22 ಸೆಪ್ಟೆಂಬರ್ 2017, 11:49 IST
Last Updated 22 ಸೆಪ್ಟೆಂಬರ್ 2017, 11:49 IST
ಆಸ್ಕರ್‌ಗೆ ನಾಮನಿರ್ದೇಶನಗೊಂಡ ‘ನ್ಯೂಟನ್‌’
ಆಸ್ಕರ್‌ಗೆ ನಾಮನಿರ್ದೇಶನಗೊಂಡ ‘ನ್ಯೂಟನ್‌’   

ಮುಂಬೈ : ಶುಕ್ರವಾರ ಬಿಡುಗಡೆಯಾಗಿರುವ ಹಿಂದಿ ಚಲನಚಿತ್ರ ‘ನ್ಯೂಟನ್’  ಆಸ್ಕರ್ ವಿದೇಶಿ ಚಲನಚಿತ್ರ ವಿಭಾಗದ ಸ್ಪರ್ಧೆಗೆ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ.

 ಆಸ್ಕರ್ ವಿದೇಶಿ ಚಲನಚಿತ್ರ ವಿಭಾಗದ ಸ್ಪರ್ಧೆಗೆ  ಒಟ್ಟು 26 ಚಿತ್ರಗಳು ಪ್ರವೇಶ ಪಡೆದಿದ್ದವು. ಸದಸ್ಯರ ಒಮ್ಮತದಿಂದ ‘ನ್ಯೂಟನ್’ ಚಿತ್ರವನ್ನು ಸ್ಪರ್ಧೆಗೆ ಕಳುಹಿಸಲು ಆಯ್ಕೆಮಾಡಲಾಗಿದೆ ಎಂದು ಭಾರತೀಯ ಚಲನಚಿತ್ರ ಮಂಡಳಿ (ಎಫ್ಎಫ್‌ಐ) ಮುಖ್ಯಸ್ಥರಾಗಿರುವ ತೆಲುಗು ಚಿತ್ರರಂಗದ ನಿರ್ಮಾಪಕ ಸಿ.ವಿ.ರೆಡ್ಡಿ ತಿಳಿಸಿದ್ದಾರೆ.

‘ನ್ಯೂಟನ್’ ಚಿತ್ರದಲ್ಲಿ ಜಾಪ್ರಭುತ್ವದ ಮಿತಿಗಳನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ.  ಅಮಿತ್ ಮಾಸುರಕರ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ರಾಜಕುಮಾರ್ ರಾವ್, ಪಂಕಜ್ ತ್ರಿಪಾಠಿ, ರಘುವೀರ್ ಯಾದವ್, ಅಂಜಲಿ ಪಾಟೀಲ್ ಹಾಗೂ ಸಂಜಯ್ ಮಿಶ್ರಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ADVERTISEMENT

‘ಚಲನಚಿತ್ರ ಇಂದು ಬಿಡುಗಡೆಯಾಗಿರುವುದು ಮತ್ತು ಆಸ್ಕರ್‌ಗೆ ಆಯ್ಕೆಯಾಗಿರುವುದು ನಮ್ಮ ಸಂತೋಷವನ್ನು ದುಪ್ಪಟ್ಟುಗೊಳಿಸಿದೆ’ ಎಂದು ಅಮಿತ್ ಮಾಸುರಕರ ತಿಳಿಸಿದ್ದಾರೆ.

ಕಾಂಬೋಡಿಯಾದ ‘ಫರ್ಸ್ಟ್ ದೆ ಕಿಲ್ಲಡ್ ಮೈ ಫಾದರ್‘, ಪಾಕಿಸ್ತಾನದ ‘ಸಾವನ್’, ಸ್ವೀಡನ್‌ನ ‘ದಿ ಸ್ಕ್ವೇರ್’, ಜರ್ಮನಿಯ ‘ಇನ್ ದಿ ಫೇಡ್’ ಹಾಗೂ ಚಿಲಿಯ ‘ಎ ಫೆಂಟಾಸ್ಟಿಕ್ ವುಮನ್’ ಚಲನಚಿತ್ರಗಳು ಆಸ್ಕರ್‌ ವಿದೇಶಿ ಭಾಷಾ ವಿಭಾಗದಲ್ಲಿ ಸ್ಪರ್ಧೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.