ADVERTISEMENT

‘ಇಂದು ಸರ್ಕಾರ್‌’ ಬಿಡುಗಡೆಗೆ ‘ಸುಪ್ರೀಂ’ ಅನುಮತಿ

ಪಿಟಿಐ
Published 27 ಜುಲೈ 2017, 20:11 IST
Last Updated 27 ಜುಲೈ 2017, 20:11 IST

ನವದೆಹಲಿ: ವಿವಾದಿತ ‘ಇಂದು ಸರ್ಕಾರ್‌’ ಸಿನಿಮಾ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ಗುರುವಾರ ನಿರಾಕರಿಸಿದೆ.  ಇದರಿಂದಾಗಿ ಚಿತ್ರವು ನಿಗದಿಯಂತೆ ಶುಕ್ರವಾರ (ಜುಲೈ 28)  ಬಿಡುಗಡೆಯಾಗಲಿದೆ.

ಚಿತ್ರದ ಬಿಡುಗಡೆ ವಿರುದ್ಧ ಸಂಜಯ ಗಾಂಧಿಯವರ ಮಗಳು ಎಂದು ಹೇಳುತ್ತಿರುವ ಪ್ರಿಯಾ ಸಿಂಗ್‌ ಪೌಲ್‌ ಅವರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ. ಇಂದಿರಾ ಗಾಂಧಿ ಅವರ ವರ್ಚಸ್ಸಿಗೆ ಮಸಿ ಬಳಿಯುವಂತಹ ಅಂಶಗಳೇ ಸಿನಿಮಾದಲ್ಲಿ ತುಂಬಿವೆ ಎಂದು ದೂರಿದ್ದ ಪ್ರಿಯಾ ಅವರ ವಾದವನ್ನು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಮಾನ್ಯ ಮಾಡಲಿಲ್ಲ. 

ಈ ಚಿತ್ರವು 1975-1977ರ ಅವಧಿಯಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.