ADVERTISEMENT

ಇನ್ನೂ 55 ಸಾವಿರ ಹಳ್ಳಿಗಳಿಗೆ ಮೊಬೈಲ್ ಸಂಪರ್ಕ ಇಲ್ಲ!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 11:35 IST
Last Updated 24 ಏಪ್ರಿಲ್ 2015, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ(ಪಿಟಿಐ): ಮೊಬೈಲ್ ಸೇವೆ ಬಳಕೆಗೆ ಬಂದು 20 ವರ್ಷ ಕಳೆದರೂ ರಾಷ್ಟ್ರದಲ್ಲಿ 55 ಸಾವಿರ ಹಳ್ಳಿಗಳು ಇನ್ನೂ ಮೊಬೈಲ್ ಸಂಪರ್ಕ ವ್ಯಾಪ್ತಿಯಿಂದ ಹೊರಗುಳಿದಿವೆ.

ಒಂದು ಅಂದಾಜಿನ ಪ್ರಕಾರ ರಾಷ್ಟ್ರದ 55,669 ಹಳ್ಳಿಗಳು ಮೊಬೈಲ್ ಸಂಪರ್ಕ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದು ದೂರವಾಣಿ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ರಾಜ್ಯಸಭೆಗೆ ಲಿಖಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಷ್ಟ್ರದಲ್ಲಿ ಮೊಬೈಲ್ ಸೇವೆ ಬಳಕೆಗೆ ಬಂದು 20 ವರ್ಷ ಕಳೆದರೂ ಇನ್ನೂ 56 ಸಾವಿರದಷ್ಟು ಹಳ್ಳಿಗಳು ಈ ಸೇವೆಯಿಂದ ಹೊರಗುಳಿದಿವೆಯೇ? ಎಂಬ ಪ್ರಶ್ನೆಗೆ ರವಿಶಂಕರ್ ಪ್ರಸಾದ್ ಅವರು ‘ಹೌದು’ ಎಂದು ಹೇಳಿದ್ದಾರೆ.

ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುಎಸ್ಒಎಫ್) ಅಡಿ ಐದು ಹಣಕಾಸು ವರ್ಷದಲ್ಲಿ ಹಂತ ಹಂತವಾಗಿ ಹಳ್ಳಿಗಳಿಗೆ ಮೊಬೈಲ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಮಾಲಯದ ರಾಜ್ಯಗಳ ವ್ಯಾಪ್ತಿಯ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಉತ್ತರಖಂಡದಲ್ಲಿ ತಾಂತ್ರಿಕ ಹಾಗೂ ಅಂದಾಜು ವೆಚ್ಚ ಒಳಗೊಂಡು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈಶಾನ್ಯ ರಾಜ್ಯಗಳ 8,621 ಹಳ್ಳಿಗಳನ್ನು ಮೊಬೈಲ್ ಸಂಪರ್ಕ ವ್ಯಾಪ್ತಿಯಡಿ ತರಲು ಟೆಲಿಕಾಂ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.