ADVERTISEMENT

ಉಚಿತ ವಾಹಿನಿಗಳಿಗೆ ವಿನಾಯಿತಿ?

ತಾಸಿಗೆ 12 ನಿಮಿಷ ಮಾತ್ರ ಜಾಹೀರಾತು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಪ್ರತಿ ತಾಸು ಕಾರ್ಯಕ್ರಮದಲ್ಲಿ ಗರಿಷ್ಠ 12 ನಿಮಿಷ ಜಾಹೀರಾತು ಪ್ರಸಾರ ಮಾಡುವ ನಿಯಮದಿಂದ ಉಚಿತ ಟಿ.ವಿ ವಾಹಿನಿ­ಗಳಿಗೆ ವಿನಾಯಿತಿ ದೊರೆಯುವ ಸಾಧ್ಯತೆ ಇದೆ.

‘ತಾಸಿಗೆ 12 ನಿಮಿಷ ಮಾತ್ರ ಜಾಹೀರಾತು ನೀಡಬೇಕು ಎಂಬ ನಿಯಮ­­ದಿಂದ ಉಚಿತ ಟಿ.ವಿ ವಾಹಿನಿ­ಗಳಿಗೆ ವಿನಾಯಿತಿ ನೀಡುವ ಬಗ್ಗೆ  ಶೀಘ್ರ ನಿರ್ಧಾರ ಕೈಗೊಳ್ಳ­ಲಾ­ಗುವುದು’ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿ­ದ್ದಾರೆ. 

ಆದರೆ ಶುಲ್ಕ ವಿಧಿಸುವ (ಪೇ ಚಾನೆಲ್‌) ವಾಹಿನಿಗಳಿಗೆ ತಾಸಿಗೆ ಗರಿಷ್ಠ 12 ನಿಮಿಷ ಜಾಹೀರಾತು ಪ್ರಸಾರದ ನಿಯಮ ಅನ್ವಯ ಆಗುತ್ತದೆ. ಶುಲ್ಕ ವಿಧಿಸುವ ವಾಹಿನಿಗಳು ಉಚಿತ ವಾಹಿನಿಗಳಾಗಿ ಪರಿವರ್ತನೆಯಾಗಲು ಇದೊಂದು ಉತ್ತೇಜನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಾಹಿನಿಯು ಅತಿಯಾಗಿ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದರೆ ವೀಕ್ಷಕರಿಗೆ ಅದು ಉಚಿತವಾಗಿ ದೊರೆಯಬೇಕು. ಗ್ರಾಹಕರ ಹೊರೆಯನ್ನು ಕಡಿಮೆ ಮಾಡುವುದು ಈ ನಿರ್ಧಾರದ ಹಿಂದಿನ ಉದ್ದೇಶ ಎಂದು ಜಾವಡೇಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.