ADVERTISEMENT

ಉತ್ತರ ಪ್ರದೇಶ: ನಿಲ್ಲದ ಸರ್ಕಾರ–ರಾಜ್ಯಪಾಲರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಲಖನೌ (ಐಎಎನ್‌ಎಸ್‌): ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷ ಹಾಗೂ ರಾಜ್ಯಪಾಲ ರಾಮ್ ನಾಯ್ಕ್‌ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ.

ಅಧಿಕಾರ ವಹಿಸಿಕೊಂಡು ಮೂರು ತಿಂಗಳಾದ ಸಂದರ್ಭದಲ್ಲಿ  ರಾಜ್ಯಪಾಲರು ಸೋಮವಾರ  ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸುಧಾರಣೆಯಾಗಬೇಕಿದೆ ಎಂದು ಹೇಳಿರುವುದು ಸಮಾಜವಾದಿ ಪಕ್ಷವನ್ನು ತೀವ್ರವಾಗಿ ಕೆರಳಿಸಿದೆ. ರಾಜ್ಯಪಾಲರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ಸಮಾಜವಾದಿ ಪಕ್ಷ ‘ರಾಜ್ಯಪಾಲರು ಸಂವಿಧಾನ ನೀಡಿರುವ ಅಧಿಕಾರಿ ವ್ಯಾಪ್ತಿಯನ್ನೂ ಮೀರಿ ವರ್ತಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.