ADVERTISEMENT

ಎಂಟಿಸಿಆರ್‌: ಭಾರತಕ್ಕೆ ಪೂರ್ಣ ಸದಸ್ಯತ್ವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 9:49 IST
Last Updated 27 ಜೂನ್ 2016, 9:49 IST
ಎಂಟಿಸಿಆರ್‌: ಭಾರತಕ್ಕೆ ಪೂರ್ಣ ಸದಸ್ಯತ್ವ
ಎಂಟಿಸಿಆರ್‌: ಭಾರತಕ್ಕೆ ಪೂರ್ಣ ಸದಸ್ಯತ್ವ   

ನವದೆಹಲಿ: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್‌)ಯಲ್ಲಿ ಭಾರತ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದಿದೆ.

ಭಾರತ ಸೋಮವಾರ ಬೆಳಿಗ್ಗೆ ಎಂಟಿಸಿಆರ್‌ನ 35ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಯಾಗಿದೆ. ಇದರ ಫಲವಾಗಿ ಅಂತರರಾಷ್ಟ್ರೀಯ ಪ್ರಸರಣ ನಿಯಮಗಳ ಪರಸ್ಪರ ಸಹಕಾರಕ್ಕೆ ನೆರವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಫ್ರಾನ್ಸ್‌ನ ನಿಯೋಜಿತ ರಾಯಭಾರಿ ಅಲೆಕ್ಸಾಂಡರ್‌ ಜಿಗ್ಲೇರ್‌ ಹಾಗೂ ನೆದರ್‌ಲೆಂಡ್‌ನ ರಾಯಭಾರಿ ಅಲ್ಪೊನ್ಸಸ್‌ ಸ್ಟೊಯ್ಲಿಂಗ್, ಲುಕ್ಸಂಬರ್ಗ್‌ನ ಡಿ ಅಫ್ಯೈರ್ಸ್‌ ಹೂಬೆರ್ಟಿ ಅವರ ಸಮ್ಮುಖದಲ್ಲಿ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈ ಶಂಕರ್‌ ಸಹಿ ಹಾಕಿದರು.

ಇನ್ನು ಮುಂದೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಭಾರತದ ಯತ್ನಕ್ಕೆ ಹಾದಿ ಸುಗಮವಾಗಿದ್ದು, ಜಾಗತಿಕ ಪ್ರಸರಣ ನಿಷೇಧದ ನಿಯಮಗಳ ಸಹಕಾರಕ್ಕೆ ಪೂರಕವಾಗಲಿದೆ.

ಸದಸ್ಯತ್ವ ಗಳಿಕೆಯಿಂದ ಭಾರತ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸಿ ಬೇರೆ ರಾಷ್ಟ್ರಗಳಿಗೂ ಮಾರಾಟ ಮಾಡುವ ಅವಕಾಶವನ್ನು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.