ADVERTISEMENT

ಎಜಿ ಹುದ್ದೆ ತೊರೆಯಲು ರೋಹಟಗಿ ನಿರ್ಧಾರ

ಪಿಟಿಐ
Published 11 ಜೂನ್ 2017, 19:51 IST
Last Updated 11 ಜೂನ್ 2017, 19:51 IST

ನವದೆಹಲಿ: ಯಾವುದೇ ಕಾರಣಕ್ಕೂ ಮತ್ತೊಂದು ಅವಧಿಗೆ ಅಟಾರ್ನಿ ಜನರಲ್‌ (ಎಜಿ) ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಮುಕುಲ್‌ ರೋಹಟಗಿ ಸ್ಪಷ್ಟಪಡಿಸಿದ್ದಾರೆ.

ಮೂರು ವರ್ಷಗಳಿಂದ ಅಟಾರ್ನಿ ಜನರಲ್‌ ಹುದ್ದೆಯಲ್ಲಿರುವ ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಕೋರಿ ಕಳೆದ ತಿಂಗಳು ಸರ್ಕಾರಕ್ಕೆ  ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

‘ಅಟಾರ್ನಿ ಜನರಲ್‌ ಹುದ್ದೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದು ಸಾಕು. ಮತ್ತೆ ವಕೀಲ ವೃತ್ತಿಗೆ ಹಿಂದಿರುಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರೋಹಟಗಿ ಅವರನ್ನು ಈ ಹುದ್ದೆಗೆ ನೇಮಕ ಮಾಡಿತ್ತು.
ಮುಂದಿನ ಆದೇಶ ಬರುವವರೆಗೂ ಅಟಾರ್ನಿ ಜನರಲ್‌ ಹುದ್ದೆಯಲ್ಲಿ ರೋಹಟಗಿ ಅವರನ್ನು ಮುಂದುವರಿಸಿ ನೇಮಕಾತಿಗೆ ಸಂಬಂಧಿಸಿದ ಸಂಪುಟ ಸಮಿತಿ ಈಚೆಗೆ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.