ADVERTISEMENT

ಎನ್‌ಸಿಪಿ ಶಾಸಕನ ವಿರುದ್ಧ ಅತ್ಯಾಚಾರದ ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 9:57 IST
Last Updated 13 ಸೆಪ್ಟೆಂಬರ್ 2014, 9:57 IST

ಸೊಲ್ಲಾಪುರ (ಪಿಟಿಐ): ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ಲಕ್ಷ್ಮಣ್‌ರಾವ್‌ ದೋಬ್ಲೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಲಕ್ಷ್ಮಣ್‌ರಾವ್‌ ದೋಬ್ಲೆ ಅವರು   ಸೊಲ್ಲಾಪುರ ವಿಧಾನಸಭಾ ಕ್ಷೇತ್ರದ  ಶಾಸಕರು. 42 ವರ್ಷದ ಮಹಿಳೆಯೊಬ್ಬರು ದೋಬ್ಲೆ ವಿರುದ್ಧ ಇಲ್ಲಿನ ಬೊರಿವಿಲ್ಲಾ ಪೊಲೀಸ್‌ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ದೋಬ್ಲೆ ವಿರುದ್ಧ ಐಪಿಸಿ ಸೆಕ್ಷೆನ್‌ 376 (ಅತ್ಯಾಚಾರ), 323 (ಕಿರುಕುಳ), 506 (ಬೆದರಿಕೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಬಾಳ್‌ಸಿಂಗ್‌ ರಜಪೂತ್‌ ತಿಳಿಸಿದ್ದಾರೆ.

ಶಾಸಕರ ವಿರುದ್ಧ ದೂರು ದಾಖಲಿಸಿರುವ ಮಹಿಳೆ ಸ್ಥಳೀಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT