ADVERTISEMENT

ಏರ್‌ಇಂಡಿಯಾದ 17 ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಮೇ 2015, 7:35 IST
Last Updated 28 ಮೇ 2015, 7:35 IST

ನವದೆಹಲಿ (ಪಿಟಿಐ): ಉದ್ದೇಶಪೂರ್ವಕವಾಗಿ ವಿರಾಮದ ಅವಧಿಯನ್ನು ಹೆಚ್ಚಿಸಿಕೊಂಡ ಆರೋಪದ ಮೇಲೆ ಏರ್‌ಇಂಡಿಯಾ ವಿಮಾನದ 17 ಜನ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಅಮಾನತುಗೊಂಡವರಲ್ಲಿ ಹಿರಿಯ ಗಗನ ಸಖಿಯರು ಸೇರಿದ್ದಾರೆ ಎನ್ನಲಾಗಿದೆ. ವಿರಾಮಕ್ಕೆ ಹೆಚ್ಚು ಕಾಲಾವಕಾಶ ಪಡೆದಿದ್ದರಿಂದ ಹಲವು ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಟದಲ್ಲಿ ವ್ಯತ್ಯಯವಾಗಿತ್ತು ಎಂದು ಏರ್‌ಇಂಡಿಯಾದ ಮೂಲಗಳು ತಿಳಿಸಿವೆ.

ಅಮಾನತುಗೊಂಡ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಏರ್‌ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT