ADVERTISEMENT

ಒಬಾಮ ದಂಪತಿಗೆ ಕರಾವಳಿ ‘ಸಿಗಡಿ ಖಾದ್ಯ’

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 19:30 IST
Last Updated 25 ಜನವರಿ 2015, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಒಬಾಮ– ಮಿಷೆಲ್‌ ದಂಪತಿಗಾಗಿ ಹೈದರಾಬಾದ್‌ ಹೌಸ್‌ನಲ್ಲಿ ಭಾನುವಾರ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ವಿವಿಧ ರಾಜ್ಯಗಳ ವಿಶಿಷ್ಟವಾದ ಭಕ್ಷ್ಯಗಳು ಅಲ್ಲಿದ್ದವು. ಮಾಂಸಾಹಾರ ಹಾಗೂ ಸಸ್ಯಾಹಾರ ಪ್ರಿಯರಿಗೆ ಪ್ರತ್ಯೇಕವಾದ ಖಾದ್ಯಗಳಿದ್ದವು. ಸೂಪ್‌, ಸಲಾಡ್, ಐಸ್‌ಕ್ರೀಮ್ ಸೇರಿದಂತೆ ನಾನಾ ರೀತಿಯ ತಿನಿಸುಗಳನ್ನು ಅಲ್ಲಿಡಲಾಗಿತ್ತು.

ಸಿಗಡಿಯನ್ನು ಹುರಿದು ಅದಕ್ಕೆ ಕೇರಳದ ತೆಲ್ಲಿ­ಚೇರಿಯ ಅತ್ಯುತ್ತಮ ಕಾಳು ಮೆಣಸು ಸಿಂಪಡಿಸಿ ಸಿದ್ಧಪಡಿಸಿದ್ದ ನಮ್ಮದೇ ಕರಾವಳಿಯ ‘ಶ್ರಿಂಪ್‌ ಕರಾವಳಿ’ ಅಲ್ಲಿದ್ದುದು ವಿಶೇಷ.

ಮೊಸರಿನಿಂದ ಮಾಡುವ ಗುಜರಾತಿನ ‘ಕಡಿ’, ಮೀನನ್ನು ಸಾಸಿವೆಯ ಜತೆ ಬೇಯಿಸಿ ಸಿದ್ಧಪಡಿಸಿದ್ದ ಪಶ್ಚಿಮ ಬಂಗಾಳದ  ‘ಮಹಿ ಸಾರ್ಸನ್‌’, ಕುರಿ ಮರಿಯ ಮಾಂಸವನ್ನು ಟೊಮೆಟೊ ಮತ್ತು ಈರುಳ್ಳಿ ಮಸಾಲೆಯಲ್ಲಿ ಬೇಯಿಸಿದ ‘ಭುನಾ ಗೋಷ್ತ್‌ ಬೋಟಿ’, ಕಮಲದ ಕಾಂಡದಿಂದ ಸಿದ್ಧಪಡಿಸಿದ್ದ ಕಬಾಬ್‌, ಮಟರ್‌ ಪುಲಾವ್‌ ಇತ್ಯಾದಿಗಳನ್ನು ವಿಶೇಷ ಅತಿಥಿಗಳಿಗಾಗಿ ತಯಾರಿಸಲಾಗಿತ್ತು.

ಗುಲಾಬ್‌ ಜಾಮೂನ್‌, ಗಜ್ಜರಿಯ ಹಲ್ವಾ ಜತೆ ದಕ್ಷಿಣ ಭಾರತದ ಕಾಫಿ ಮತ್ತು ಗಿಡಮೂಲಿಕೆಗಳ ಚಹಾ ಸಹ ಅಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.