ADVERTISEMENT

ಕಣಿವೆಯಲ್ಲಿ 300 ಉಗ್ರರು!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 300ಕ್ಕೂ ಅಧಿಕ ಉಗ್ರರು ಆಶ್ರಯ ಪಡೆದಿದ್ದಾರೆ.  ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ತಕ್ಷಣ ಮಾತುಕತೆ ಆರಂಭವಾಗದಿದ್ದರೆ ಅವರನ್ನು ನಿಗ್ರಹಿಸುವುದು ಕಷ್ಟವಾಗಲಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.

ತಿಂಗಳ ಹಿಂದೆಯೇ ಕಾಶ್ಮೀರದಲ್ಲಿ ಗಡಿಯಾಚೆಯಿಂದ ಬಂದ 100–120 ಉಗ್ರರಿದ್ದರು. ಬುರ್ಹಾನ್‌ ವಾನಿ ಹತ್ಯೆ ನಂತರ ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಜಾಕೀರ್‌ ಮೂಸಾ, ಲಷ್ಕರ್‌–ಎ–ತಯಬಾ ಮತ್ತು ಜೈಶ್‌–ಎ –ಮೊಹಮ್ಮದ್‌ ಸಂಘಟನೆಗಳ ಉನ್ನತಮಟ್ಟದ ನಾಯಕರೊಂದಿಗಿರುವ ಛಾಯಾಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿವೆ.

ಇಸ್ಲಾಂ ಹೆಸರಿನಲ್ಲಿ ಹಿಂಸಾಚಾರ ಮುಂದುವರಿಸುವಂತೆ ಕಲ್ಲು ತೂರಾಟ ನಡೆಸುತ್ತಿರುವವರಿಗೆ ಕರೆ ನೀಡುವ ವಿಡಿಯೊವನ್ನು ಜಾಕೀರ್‌ ಮೂಸಾ ಕಳೆದ ತಿಂಗಳು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.