ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದಲ್ಲಿ ನಯಾಪೈಸೆಯನ್ನೂ ಬಿಡದೆ ವಾಪಸ್ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.
ಭಾರತೀಯರು ವಿದೇಶಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ ಎಷ್ಟು ಎಂಬ ಬಗೆ ಸರಿಯಾದ ಅಂದಾಜು ಇಲ್ಲ. ಅದೇನೇ ಇದ್ದರೂ
ಕಪ್ಪು ಹಣಕ್ಕೆ ಸಂಬಂಧಿಸಿ ಈ ‘ಪ್ರಧಾನ ಸೇವಕ’ನ ಮೇಲೆ ನಂಬಿಕೆ ಇರಲಿ. ಈ ದೇಶದಿಂದ ಹೊರಹೋಗಿರುವ ಬಡವರ ಪ್ರತಿಯೊಂದು ಪೈಸೆಯೂ ವಾಪಸ್ ಬರಲೇಬೇಕು ಎಂಬುದಕ್ಕೆ ಬದ್ಧವಾಗಿದ್ದೇನೆ – ನರೇಂದ್ರ ಮೋದಿ |
ಸರ್ಕಾರವು ಕಪ್ಪುಹಣವನ್ನು ವಾಪಸ್ ತರಲು ‘ಸರಿಯಾದ ದಿಕ್ಕಿನಲ್ಲೇ’ ಪ್ರಯತ್ನ ನಡೆಸುತ್ತಿದೆ ಎಂದು ಸಮರ್ಥಿಸಿಕೊಂಡರು.
ರೇಡಿಯೋದಲ್ಲಿ ತಾವು ಆರಂಭಿಸಿರುವ ‘ಮನ್ ಕಿ ಬಾತ್’ (ಮನದ ಮಾತು) ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ವಿದೇಶಗಳಲ್ಲಿ ಇರುವ ಕಪ್ಪುಹಣ ವಾಪಸ್ ತರುವ ವಿಷಯವು ನನ್ನ ಪಾಲಿಗೆ ನಂಬಿಕೆಯ ಕಟ್ಟಳೆಯಾಗಿದೆ. ಇದನ್ನು ಸಾಧ್ಯವಾಗಿಸಲು ಯಾವ ಲೋಪವೂ ಇಲ್ಲದಂತೆ ಪರಿಶ್ರಮ ಹಾಕುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.