ADVERTISEMENT

ಕಬ್ಬಿನ ಎಫ್‌ಆರ್‌ಪಿ ₹255 ನಿಗದಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:11 IST
Last Updated 24 ಮೇ 2017, 20:11 IST
ಕಬ್ಬಿನ ಎಫ್‌ಆರ್‌ಪಿ ₹255 ನಿಗದಿಗೆ ಅನುಮೋದನೆ
ಕಬ್ಬಿನ ಎಫ್‌ಆರ್‌ಪಿ ₹255 ನಿಗದಿಗೆ ಅನುಮೋದನೆ   

ನವದೆಹಲಿ: ಕಬ್ಬಿನ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ ₹255ಕ್ಕೆ ನಿಗದಿಪಡಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

2017–18ನೇ ಸಾಲಿನಲ್ಲಿ ರೈತರಿಂದ ಕಾರ್ಖಾನೆಗಳು ಖರೀದಿಸುವ ಕಬ್ಬಿಗೆ ಇದು ಅನ್ವಯವಾಗುತ್ತದೆ.

‘ಸಕ್ಕರೆ ಕಾರ್ಖಾನೆಗಳ ಸ್ಥಿತಿ ಈಗ ಉತ್ತಮವಾಗಿದೆ. ಹಾಗಾಗಿ ಎಫ್‌ಆರ್‌ಪಿಯನ್ನು ಹೆಚ್ಚಿಸಲಾಗಿದೆ. ಹಿಂದಿನ ಬೆಲೆಗಿಂತ ಶೇ 10.6ರಷ್ಟು ಏರಿಕೆ ಮಾಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಮತ್ತು ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ ಎಫ್‌ಆರ್‌ಪಿಯನ್ನು ಏರಿಕೆ ಮಾಡಲಾಗಿದೆ. ಎಫ್‌ಆರ್‌ಪಿ ರೈತರಿಗೆ ದೊರೆಯಲಿರುವ ಕನಿಷ್ಠ ದರವಾಗಿದೆ. ರಾಜ್ಯ ಸರ್ಕಾರಗಳು ಈ ಬೆಲೆಯನ್ನು ಇನ್ನಷ್ಟು ಹೆಚ್ಚು ಮಾಡಲು ಅವಕಾಶ ಇದೆ.  

ಕಬ್ಬು ಉತ್ಪಾದನೆ ವೆಚ್ಚ, ಬೇಡಿಕೆ ಮತ್ತು ಪೂರೈಕೆ ಸ್ಥಿತಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಬೆಲೆಗಳ ಆಧಾರದಲ್ಲಿ ಎಫ್‌ಆರ್‌ಪಿ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.