ADVERTISEMENT

ಕಾಂಗ್ರೆಸ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ­ವಾದಿ ಕಾಂಗ್ರೆಸ್‌ ಪಕ್ಷವನ್ನು (ಎನ್‌ಸಿಪಿ) ‘ರಾಷ್ಟ್ರೀಯವಾದಿ ಭ್ರಷ್ಟಾಚಾರ ಪಕ್ಷ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಈಗ ಆ ಪಕ್ಷದೊಂದಿಗೆ ಕೈಜೋಡಿಸುವುದು ಸರಿಯೇ  ಎಂದು ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಪ್ರಶ್ನಿಸಿದೆ.

ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮೋದಿ ಮಾಡಿದ್ದ ಟೀಕೆಗಳನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌,  ‘ರಾಷ್ಟ್ರೀಯವಾದಿ ಭ್ರಷ್ಟಾಚಾರ ಪಕ್ಷ’ದೊಂದಿಗೆ ಬಿಜೆಪಿ ಕೈಜೋಡಿಸುತ್ತದೊ, ಇಲ್ಲವೊ ಎಂಬುದನ್ನು ಕಾದು ನೋಡುತ್ತೇವೆ  ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.