ADVERTISEMENT

ಕಾರ್ಯಕ್ಷಮತೆ ಪರಿಶೀಲನೆ

ಪಿಟಿಐ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST

ನವದೆಹಲಿ: ‘ಕಾರ್ಯಕ್ಷಮತೆ ಇಲ್ಲದ ನೌಕರರನ್ನು ಪತ್ತೆ ಮಾಡುವ ಸಲುವಾಗಿ, ಸುಮಾರು 67,000 ನೌಕರರ ಸೇವಾ ದಾಖಲೆಯ ಪರಿಶೀಲನೆ ನಡೆಸಲಾಗುತ್ತಿದೆ. ಇದರಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳೂ ಸೇರಿದ್ದಾರೆ’ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮಾಹಿತಿ ನೀಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದ್ದು...
* ನಿಯಮಿತವಾಗಿ ಇಂತಹ ಪರಿಶೀಲನೆ ನಡೆಸಲು ಅವಕಾಶವಿದೆ
* ಪ್ರತಿ ನೌಕರ ತನ್ನ ಸೇವಾ ಅವಧಿಯಲ್ಲಿ ಎರಡು ಬಾರಿ ಇಂತಹ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ
* 15 ವರ್ಷದ ಸೇವೆಯ ನಂತರ ಮೊದಲ ಪರಿಶೀಲನೆ,  25 ವರ್ಷದ ನಂತರ ಎರಡನೇ ಪರಿಶೀಲನೆ
* ಕಾರ್ಯಕ್ಷಮತೆ ಇಲ್ಲದ ನೌಕರರು ವಿವಿಧ ಸ್ವರೂಪದ ಕ್ರಮಗಳನ್ನು ಎದುರಿಸಬೇಕಾಗುತ್ತದೆ
* ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರಲು ಇದು ನೆರವಾಗುತ್ತದೆ
* ಭ್ರಷ್ಟಾಚಾರ ಕಡಿಮೆ ಮಾಡುತ್ತದೆ
* ಪ್ರಾಮಾಣಿಕ ಮತ್ತು ದಕ್ಷ ನೌಕರರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ

ಅಂಕಿಅಂಶ

ADVERTISEMENT

* ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ 48.85ಲಕ್ಷ

* ಈ ಬಾರಿ ಪರಿಶೀಲನೆಗಾಗಿ ಗುರುತಿಸಿರುವ ನೌಕರರ ಸಂಖ್ಯೆ 67,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.