ADVERTISEMENT

ಕಾಸ್ಟಿಂಗ್ ಕೌಚ್ ಸಿನಿಮಾರಂಗದಲ್ಲಿ ಮಾತ್ರವಲ್ಲ ಸಂಸತ್‍ನಲ್ಲಿಯೂ ಇದೆ: ರೇಣುಕಾ ಚೌಧರಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 12:59 IST
Last Updated 24 ಏಪ್ರಿಲ್ 2018, 12:59 IST
ರೇಣುಕಾ ಚೌಧರಿ
ರೇಣುಕಾ ಚೌಧರಿ   

ನವದೆಹಲಿ: ಕಾಸ್ಟಿಂಗ್ ಕೌಚ್ ಎಂಬುದು ಕಠೋರ ಸತ್ಯ. ಸಿನಿಮಾ ರಂಗದಲ್ಲಿ ಮಾತ್ರವಲ್ಲ ಅದು ಎಲ್ಲ ಕಡೆಯೂ ಇದೆ. ಸಂಸತ್ತಿನಲ್ಲಿಯೂ ಇದೆ ಎಂದು ಕಾಂಗ್ರೆಸ್ ನೇತಾರೆ ರೇಣುಕಾ ಚೌಧರಿ ಹೇಳಿದ್ದಾರೆ.

ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ನೀಡಿದ ಹೇಳಿಕೆಗೆ ಮಾಜಿ ಸಂಸದೆ ರೇಣುಕಾ ಚೌಧರಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

[related]

ADVERTISEMENT

ಸಿನಿಮಾರಂಗದಲ್ಲಿ ಮಾತ್ರವಲ್ಲ, ಇದು ಎಲ್ಲ ಕ್ಷೇತ್ರದಲ್ಲಿಯೂ ನಡೆಯುತ್ತಿದೆ. ಸಂಸತ್ ಅಥವಾ ಇನ್ನುಳಿದ ಕ್ಷೇತ್ರಗಳಲ್ಲಿ ಇದು ನಡೆಯುವುದಿಲ್ಲ ಎಂದು ಅಂದುಕೊಳ್ಳಬೇಡಿ. ಇದೀಗ ಭಾರತೀಯರು ಇದರ ವಿರುದ್ಧ ದನಿಯೆತ್ತಿ #Metoo ಎಂದು ಹೇಳುವ ಸಮಯ ಬಂದಿದೆ ಎಂದು ರೇಣುಕಾ ಹೇಳಿದ್ದಾರೆ.

ಮಂಗಳವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಅಂದರೆ ಸಿನಿಮಾರಂಗದಲ್ಲಿ ಕೆಲಸ ಮಾಡುವುದಕ್ಕಾಗಿ ಲೈಂಗಿಕ ಸಹಕಾರದ ವಿನಿಮಯ. ಇದು ಈಗ ಶುರುವಾದದ್ದು ಏನೂ ಅಲ್ಲ. ಈ ಹಿಂದಿನಿಂದಲೇ ಇದೆ. ನೀವು ಯಾಕೆ ಸಿನಿಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡುತ್ತೀರಿ? ಇದೆಲ್ಲ ನಿಮಗೆ ಹೊಟ್ಟೆಗೆ ಅನ್ನ ನೀಡುತ್ತದೆಯಲ್ಲವೇ? ಅತ್ಯಾಚಾರ ಮಾಡಿ ಎಸೆಯುವುದಿಲ್ಲವಲ್ಲಾ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.