ADVERTISEMENT

ಕುಂಚದಲ್ಲಿ ಜೀವ ತಳೆದ ಹಂಪಿ

ಮೆಟ್ರೊಪಾಲಿಟಿನ್ ಹೋಟೆಲ್‌ನ ಆರ್ಟ್ ಸ್ಪೈಸ್‌ ಗ್ಯಾಲರಿಯಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:43 IST
Last Updated 19 ಏಪ್ರಿಲ್ 2015, 20:43 IST

ನವದೆಹಲಿ (ಪಿಟಿಐ): ವಿಜಯನಗರ ಸಾಮ್ರಾಜ್ಯದ ಕುರುಹಾಗಿರುವ ಹಂಪಿಯ ಸ್ಮಾರಕಗಳು ಇಲ್ಲಿ ನಡೆಯುತ್ತಿರುವ ಚಿತ್ರ ಪ್ರದರ್ಶನದಲ್ಲಿ ಜೀವ ತಳೆದು ನಿಂತಿವೆ. 44 ಮನಮೋಹಕ ಚಿತ್ರಗಳ ಪ್ರದರ್ಶನ ‘ದಿ ಫ್ಯಾಬ್ಲೆಡ್‌ ಹಂಪಿ’, ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯ ನೈಜ ಚಿತ್ರಣ ಕಟ್ಟಿಕೊಡುತ್ತದೆ.

ಇಲ್ಲಿನ ಮೆಟ್ರೊಪಾಲಿಟಿನ್ ಹೋಟೆಲ್‌ನ ಆರ್ಟ್ ಸ್ಪೈಸ್‌ ಗ್ಯಾಲರಿಯಲ್ಲಿ ಈ ಪ್ರದರ್ಶನ ನಡೆಯುತ್ತಿದೆ.ಖ್ಯಾತ ಕಲಾವಿದ ಗಣೇಶ್ ದೊಡ್ಡಮನಿ ಅವರು ಕುಂಚದಲ್ಲಿ ಅರಳಿದ ಈ ಚಿತ್ರಗಳಲ್ಲಿ ಬಳಕೆಯಾದ ಬೆಳಕಿನ ಬಗೆಗಳು ಚಿತ್ರಗಳಿಗೆ ಮೂರು ಆಯಾಮದ ದೃಶ್ಯಗಳನ್ನು ಕಟ್ಟಿಕೊಟ್ಟಿವೆ.

ದೊಡ್ಡಮನಿ ಅವರು ಹಂಪಿಗೆ ಸಂಬಂಧಿಸಿದಂತೆಯೇ 150ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾರೆ. ‘ಭಿನ್ನವಾದ ಬೆಳಕಿನಲ್ಲಿ, ಭಿನ್ನ ಪರಿಸರದಲ್ಲಿ ಪ್ರತಿ ಬಾರಿ ಹಂಪಿಯನ್ನು ನೋಡುವಾಗಲೂ ವಿಭಿನ್ನವಾಗಿ ನೋಡುತ್ತೇನೆ’ ಎನ್ನುತ್ತಾರೆ ಗಣೇಶ್ ದೊಡ್ಡಮನಿ.
ಮೇ 20ರವರೆಗೆ ಈ ಪ್ರದರ್ಶನ ನಡೆಯಲಿದ್ದು, ₨ 18 ಸಾವಿರದಿಂದ ₨ 2 ಲಕ್ಷದವರೆಗಿನ ಕಲಾಕೃತಿಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.