ADVERTISEMENT

ಕೇಂದ್ರ ಮಾಜಿ ಸಚಿವ ಮುರಳಿ ದೇವ್ರಾ ನಿಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 10:19 IST
Last Updated 24 ನವೆಂಬರ್ 2014, 10:19 IST

ಮುಂಬೈ (ಪಿಟಿಐ): ಕಾಂಗ್ರೆಸ್‌ ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮುರಳಿ ದೇವ್ರಾ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ದೀರ್ಘಕಾಲಿನ ಅನಾರೋಗ್ಯದಿಂದ ಡಿಯೋರ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ಮುರಳಿ ದೇವ್ರಾ ಅವರು ಕಾಂಗ್ರೆಸ್‌ ಮುಖಾಂತರ ರಾಜಕೀಯ ಜೀವನ ಆರಂಭಿಸಿದರು. 1975ರಲ್ಲಿ ಮುಂಬೈ ಮೇಯರ್‌ ಆಗಿದ್ದರು. ನಾಲ್ಕು ಬಾರಿ ಲೋಕಸಭೆಗೆ ಹಾಗೂ ಮೂರು ಸಲ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ದೇವ್ರಾ ಅವರು ಪ್ರಬುದ್ಧ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT