ADVERTISEMENT

ಕೋಲ್ಕತ್ತ ಬಹುಮಹಡಿ ಕಟ್ಟಡದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 10:47 IST
Last Updated 2 ಸೆಪ್ಟೆಂಬರ್ 2014, 10:47 IST

ಕೋಲ್ಕತ್ತ (ಪಿಟಿಐ): ಇಲ್ಲಿನ ಜವಹರಲಾಲ್‌ ನೆಹರೂ ರಸ್ತೆಯ ಪಾರ್ಕ್ ಸ್ಟೀನ್‌ ಪ್ರದೇಶದ ಪ್ರಸಿದ್ಧ 'ಚಟರ್ಜಿ ಇಂಟರ್‌ನ್ಯಾಷನಲ್‌'  ಬಹು­ಮಹಡಿ ಕಟ್ಟಡದಲ್ಲಿ ಮಂಗಳವಾರ ಬೆಳಿಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದೆ.

ಕಟ್ಟಡದೊಳಗೆ ಸಿಲುಕಿದ್ದ 20 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೂ ನಾಲ್ವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಮುಂದು­ವರಿದಿದೆ.

ದಟ್ಟ ಹೊಗೆ ವ್ಯಾಪಿಸಿ­ರುವು­ದರಿಂದ ರಕ್ಷಣಾ ಕಾರ್ಯಾಚರಣೆಗೆ ತುಸು ಹಿನ್ನಡೆ ಆಗಿದೆ ಎಂದು ಪಶ್ಚಿಮ ಬಂಗಾಳದ ಸಚಿವ ಜಾವೇದ್‌ ಖಾನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಟ್ಟಡದ 12 ಮತ್ತು 15ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಇತರೆಡೆಗೂ ವ್ಯಾಪಿಸಿತು. ಅಗ್ನಿ ಶಾಮಕ ದಳದ 20 ವಾಹನಗಳು ಕಟ್ಟಡ ಸುತ್ತುವರೆದು ಅಗ್ನಿ ನಂದಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT