ADVERTISEMENT

ಕೋಲ್ಕತ್ತ: ಮೇಲ್ಸೇತುವೆ ಕುಸಿದು 8 ಸಾವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2016, 11:17 IST
Last Updated 31 ಮಾರ್ಚ್ 2016, 11:17 IST
ಕೋಲ್ಕತ್ತ: ಮೇಲ್ಸೇತುವೆ ಕುಸಿದು 8 ಸಾವು
ಕೋಲ್ಕತ್ತ: ಮೇಲ್ಸೇತುವೆ ಕುಸಿದು 8 ಸಾವು   

ಕೋಲ್ಕತ್ತ(ಪಿಟಿಐ): ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಎಂಟು ಜನ ಮೃತಪಟ್ಟು, ಹಲವರು ಅವಶೇಷಗಳ ಅಡಿ ಸಿಲುಕಿರುವ ಘಟನೆ ಉತ್ತರ ಕೋಲ್ಕತ್ತದಲ್ಲಿ ಗುರುವಾರ ನಡೆದಿದೆ.

ಗಿರೀಶ್ ಉದ್ಯಾನ ಬಳಿಯ ಗಣೇಶ ಚಿತ್ರಮಂದಿರ ಸಮೀಪದ ವಿವೇಕಾನಂದ ಮೇಲ್ಸೇತುವೆ ಕುಸಿದಿದೆ.

ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣಾ ಕಾರ್ಯಾ ನಡೆಯುತ್ತಿದ್ದು, ಘಟನೆಯಲ್ಲಿ ಎಂಟು ಜನ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚಣೆಗೆ ಸೇನಾ ಸಿಬ್ಬಂದಿ ಕೈಜೋಡಿಸಿದ್ದಾರೆ.

ದಿದಿ ಪ್ರಚಾರ ಮೊಟಕು: ಮತ್ತೊಂದೆಡೆ, ಘಟನೆ ಬೆನ್ನಲ್ಲೇ ಪಶ್ಚಿಮ ಮಿಡ್ನಾಪುರದಲ್ಲಿ ನಡೆಸುತ್ತಿದ್ದ ಪ್ರಚಾರ ಮೊಟಕುಗೊಳಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜನಾಥ್ ಸೂಚನೆ: ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ. ಚುನಾವಣಾ ಪ್ರಚಾರ ನಿಮಿತ್ತ ರಾಜನಾಥ್ ಅವರು ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ.

ADVERTISEMENT

ಪ್ರಧಾನಿ ಸಂತಾಪ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.