ADVERTISEMENT

ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 18:45 IST
Last Updated 26 ಸೆಪ್ಟೆಂಬರ್ 2016, 18:45 IST

ಅಹಮದಾಬಾದ್‌: ಉತ್ತರ ಗುಜರಾತ್‌ನಲ್ಲಿ ದಲಿತ ಕುಟುಂಬದ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ. ಬನಸ್ಕಾಂತಾ ಜಿಲ್ಲೆಯ ಅಮಿರ್‌ಘಡ ತಾಲ್ಲೂಕಿನ ಮೊಟಾ ಕಾರ್ಜಾ ಗ್ರಾಮದ ನಿಲೇಶ್‌ ರಾಣಾವಾ ಸಿಯಾ ಹಾಗೂ ಆತನ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಲಾಗಿತ್ತು.

ಮೇಲ್ವರ್ಗದ ಕುಟುಂಬಕ್ಕೆ ಸೇರಿದ ಹಸುವಿನ ಕಳೇಬರವನ್ನು ಹೊಲದಲ್ಲಿ ತಕ್ಷಣವೇ ಹೂಳಲು ನಿರಾಕರಿಸಿದ್ದ ನಿಲೇಶ್‌, ಮರುದಿನ ಕೆಲಸ ಮಾಡು ವುದಾಗಿ ತಿಳಿಸಿದ್ದರು. ಈ ವೇಳೆ ಮೇಲ್ವರ್ಗದವರು ನಿಲೇಶ್‌ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೆಲವರು ನಿಲೇಶ್‌ ಗರ್ಭಿಣಿ ಪತ್ನಿ ಮೇಲೂ ಹಲ್ಲೆ ನಡೆಸಿದ್ದರು. ಈ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಗರ್ಭಿಣಿಗೆ ಹೊಡೆದ ಪೊಲೀಸರು:  ಇಲ್ಲಿನ ಪುರಸಭೆ ಕಚೇರಿ ಎದರು ಪ್ರತಿಭಟ ನಾನಿರತ ಗರ್ಭಿಣಿಗೆ (ಪೌರಕಾರ್ಮಿಕರು) ಪೊಲೀಸರು ಹೊಡೆದಿದ್ದಾರೆ ಎಂದು ರಾಜ್ಯದ ದಲಿತ ನಾಯಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ. ಈ ಕುರಿತು ಸಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ಅವರು ಮಾಧ್ಯಮಗಳಿಗೂ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.